ಆತ್ಮವಿಶ್ವಾಸದಿಂದ ಬೀಗಿದ ಸಿದ್ದರಾಮಯ್ಯ

next election congress will win -Siddaramaiah

23-02-2018

ಬೆಂಗಳೂರು: ಕರ್ನಾಟಕದಲ್ಲಿ ದೇವರಾಜ ಅರಸರ ನಂತರ ಐದು ವರ್ಷಗಳ ಪೂರ್ಣ ಅಧಿಕಾರಾವಧಿ ಮುಗಿಸಿದ ಮೊದಲ ಮುಖ್ಯಮಂತ್ರಿ ನಾನು,ಇದು ಜನರಿಗೆ ನನ್ನ ಬಗ್ಗೆ ಇರುವ ವಿಶ್ವಾಸದ ಸಂಕೇತ, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂದು ಸಿಎಂ ಸಿದ್ಧರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸಿದ ಸಿದ್ಧರಾಮಯ್ಯ, ಕಳೆದ ಬಾರಿ ಬಿಜೆಪಿ ಅಧಿಕಾರದಲ್ಲಿದ್ದಾಗ ಮೂವರು ಮುಖ್ಯಮಂತ್ರಿಗಳಾದರು, ಆದರೆ, ನಾವು ಐದು ವರ್ಷಗಳ ಕಾಲ ಸುಭದ್ರ ಸರ್ಕಾರ ನೀಡಿದ್ದೇವೆ, ಜನರಿಗೆ ಕಾಂಗ್ರೆಸ್ ಬಗ್ಗೆ ಇರುವ ನಂಬಿಕೆಯೇ ಮುಂದಿನ ಚುನಾವಣೆಯಲ್ಲಿ ಮರಳಿ ನಮ್ಮನ್ನು ಅಧಿಕಾರಕ್ಕೆ ತರುತ್ತದೆ ಎಂದರು.

ಮುಂದಿನ ಬಾರಿ ಅಧಿಕಾರಕ್ಕೆ ಬರುವ ನಿಮ್ಮ ಕನಸು ಕನಸಾಗಿಯೇ ಉಳಿಯಲಿದೆ ಎಂದು ಸಿದ್ದರಾಮಯ್ಯನವರು ಬಿಜೆಪಿ ಸದಸ್ಯರನ್ನು ಛೇಡಿಸಿದರು. ಆದಕ್ಕೆ, ಬಿಜೆಪಿ ಸದಸ್ಯರು ಮತ್ತೆ ಸಿಎಂ ಆಗುವ ಕನಸು ಕಾಣಬೇಡಿ, ನಿಮ್ಮನ್ನು ನಿಮ್ಮ ಪಕ್ಷದವರು ಇನ್ನೂ ಸಿಎಂ ಕ್ಯಾಂಡಿಡೇಟ್ ಎಂದೇ ಘೋಷಿಸಿಲ್ಲ ಎಂದು ತಿರುಗೇಟು ನೀಡಿದರು. ಶಾಸಕ ಸಿ.ಟಿ.ರವಿ ಮಾತನಾಡಿ, ಕೋಟೆ ಕಟ್ಟಿ ಮೆರೆದೋರೆಲ್ಲ ಏನಾದರು ಅಂತ ಡಾ.ರಾಜ್ ಕುಮಾರ್ ಹಾಡಿರುವ ಹಾಡನ್ನು ನೆನಪಿಸಿಕೊಳ್ಳಿ ಎಂದಾಗಲೂ ಪಟ್ಟು ಬಿಡದ ಸಿದ್ದರಾಮಯ್ಯ, ನಾವೇ ಅಧಿಕಾರಕ್ಕೆ ಬರುತ್ತೇವೆ ಎಂಬ ಬಗ್ಗೆ ನನ್ನಲ್ಲಿ ವರದಿ ಇದೆ, ನಿಮ್ಮ ಬಳಿ ಏನು ವರದಿ ಇದೆಯೋ ಅದನ್ನು ನೀವು ಹೇಳಿ ಎಂದರು.


ಸಂಬಂಧಿತ ಟ್ಯಾಗ್ಗಳು

siddaramaiah election ತಿರುಗೇಟು ಸಿ.ಟಿ.ರವಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ