ಸರಣಿ ಅಪಘಾತ ಇಬ್ಬರ ದುರ್ಮರಣ

serial accident in bangalore: 2 people died

23-02-2018

ಬೆಂಗಳೂರು: ಲಾರಿ, ಬಸ್ ಹಾಗೂ ಬೊಲೆರೋ ಜೀಪ್ ನಡುವೆ ಸರಣಿ ಅಪಘಾತ ಸಂಭವಿಸಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ದುರ್ಘಟನೆ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಟಿ.ಬೇಗೂರು ಬಳಿ ನಡೆದಿದೆ. ಸರಣಿ ಅಪಘಾತದಲ್ಲಿ ಬೊಲೆರೋ ಜೀಪಿನಲ್ಲಿದ್ದ ತುಮಕೂರಿನ ಗಂಗೋತ್ರಿನಗರದ ಕೆಂಪರಾಜ್(34)ಹಾಗೂ ರಾಜೇಶ್(28)ಮೃತಪಟ್ಟಿದ್ದಾರೆ.

ಟಿ.ಬೇಗೂರು ಬಳಿಯ ತಿಪ್ಪಗೊಂಡನಹಳ್ಳಿಯಲ್ಲಿ ಬೆಳಿಗ್ಗೆ 8.30ರ ವೇಳೆ ವೇಗವಾಗಿ ಬಂದ ಲಾರಿ ಮುಂದೆ ಸಾಗುತ್ತಿದ್ದ ಬೊಲೆರೋ ಜೀಪ್ ಹಾಗೂ ಬಸ್‍ಗೆ ಗುದ್ದಿದೆ. ಬಸ್ ಹಾಗೂ ಲಾರಿ ಮಧ್ಯದಲ್ಲಿ ಸಿಲುಕಿದ ಜೀಪ್ ಸಂಪೂರ್ಣ ನಜ್ಜುಗುಜ್ಜಾಗಿ ಈ ದುರ್ಘಟನೆ ಸಂಭವಿಸಿದೆ. ಘಟನೆಯಿಂದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸ್ಥಳಕ್ಕೆ ನೆಲಮಂಗಲ ಸಂಚಾರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕೃಷ್ಣಕುಮಾರ್ ಅವರು ಸ್ಥಳಕ್ಕೆ ಧಾವಿಸಿ ಅಪಘಾತಗೊಂಡ ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

Accident highway ರಾಷ್ಟ್ರೀಯ ಅಪಘಾತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ