ಲಾಕಪ್ ಸೇರಿದ ಪೆಟ್ರೋಲ್ ನಾರಾಯಣ

petrol narayanaswamy surrender to police

23-02-2018

ಬೆಂಗಳೂರು: ಹೊರಮಾವು ಬಿಬಿಎಂಪಿ ಕಚೇರಿಗೆ ನುಗ್ಗಿ ಪೆಟ್ರೋಲ್ ಎರಚಿ ದಾಂಧಲೆ ನಡೆಸಿ ತಲೆಮರೆಸಿಕೊಂಡಿದ್ದ ಕಾಂಗ್ರೆಸ್ ಮುಖಂಡ ಹಾಗೂ ಶಾಸಕ ಭೈರತಿ ಬಸವರಾಜ್ ಬೆಂಬಲಿಗ ನಾರಾಯಣಸ್ವಾಮಿ ಪೊಲೀಸರಿಗೆ ಶರಣಾಗಿದ್ದಾನೆ. ಫೆಬ್ರವರಿ 21ರಂದು ಹೊರಮಾವು ಬಿಬಿಎಂಪಿ ಕಚೇರಿಗೆ ನುಗ್ಗಿ ಪೀಠೋಪಕರಣಗಳಿಗೆ ಪೆಟ್ರೋಲ್ ಸುರಿದು ಬೆಂಕಿಹಚ್ಚುವುದಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಬೆದರಿಕೆ ಹಾಕಿರುವ ದೃಶ್ಯಾವಳಿ ಬಹಿರಂಗವಾದ ತಕ್ಷಣ ಪರಾರಿಯಾಗಿದ್ದ ನಾರಾಯಣಸ್ವಾಮಿ, ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.

ನಾರಾಯಣಸ್ವಾಮಿಯನ್ನು ಬಂಧಿಸಿದ್ದು, ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಡಿಸಿಪಿ ಅಜಯ್ ಹಿಲೋರಿ ತಿಳಿಸಿದ್ದಾರೆ. ಪೆಟ್ರೋಲ್ ಸುರಿದು ದಾಂಧಲೆ ಮಾಡಿರುವುದು ಬೆಳಕಿಗೆ ಬಂದ ನಂತರ, ನಾರಾಯಣಸ್ವಾಮಿಯನ್ನು ಕಾಂಗ್ರೆಸ್ ಪಕ್ಷದಿಂದ 6 ವರ್ಷಗಳ ಉಚ್ಛಾಟನೆ ಮಾಡಲಾಗಿತ್ತು. ಇದಲ್ಲದೆ ಜಲಮಂಡಳಿ ಸದಸ್ಯತ್ವ ಸ್ಥಾನದಿಂದಲೂ ವಜಾಗೊಳಿಸಲಾಗಿತ್ತು. ದಾಂಧಲೆಕೋರ ನಾರಾಯಣಸ್ವಾಮಿಯನ್ನು ಬಂಧಿಸುವಂತೆ ಸಿಎಂ ಸಿದ್ದರಾಮಯ್ಯನವರು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆರೋಪಿಯ ಬಂಧನಕ್ಕೆ ಮೂರು ತಂಡ ರಚಿಸಿ ಶೋಧ ನಡೆಸುತ್ತಿರುವಾಗಲೇ ಓಡಿ ಬಂದಿರುವ ನಾರಾಯಣಸ್ವಾಮಿ ಪೊಲೀಸರ ಮುಂದೆ ಮಂಡಿಯೂರಿದ್ದಾನೆ.


ಸಂಬಂಧಿತ ಟ್ಯಾಗ್ಗಳು

petrol narayanaswamy police station ನ್ಯಾಯಾಲಯ ಪೀಠೋಪಕರಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ