ಬಿಬಿಎಂಪಿ ಆಸ್ತಿ ದುರ್ಬಳಕೆ ಆರೋಪ

BBMP property misuse: case filed in ACB

23-02-2018

ಬೆಂಗಳೂರು: ಬಿಬಿಎಂಪಿ ಗುತ್ತಿಗೆ ನೀಡಿರುವ ಆಸ್ತಿಯನ್ನೇ ಅಡಮಾನವಿಟ್ಟಿರುವ ಆರೋಪದಡಿ ಎಸಿಬಿಯಲ್ಲಿ ದೂರು ದಾಖಲಾಗಿದೆ. ಮೇವರಿಕ್ ಹೋಲ್ಡಿಂಗ್ಸ್ ಆ್ಯಂಡ್ ಇನ್ವೆಸ್ಟ್ ಮೆಂಟ್ ಕಂಪೆನಿ ಮಾಲೀಕ ಉದಯ್ ಗರುಡಾಚಾರ್ ವಿರುದ್ಧ ಭ್ರಷ್ಟಾಚಾರ ವಿರೋಧಿ ವೇದಿಕೆ ಮುಖಂಡ ಶ್ರೀನಿವಾಸ್ ಎಸಿಬಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಶಾಂತಿನಗರ ವಿಧಾಸಭಾ ಕ್ಷೇತ್ರ ವ್ಯಾಪ್ತಿಯ ಮೆಗ್ರಾತ್ ರಸ್ತೆಯ ಮುಂದಿರುವ ಸುಮಾರು 1,90,000 ಚ.ಮೀ ವಿಸ್ತೀರ್ಣವಿರುವ ಈ ಸ್ವತ್ತನ್ನು ಬಿಬಿಎಂಪಿ 30ವರ್ಷಗಳ ಅವಧಿಗೆ ಗುತ್ತಿಗೆ ನೀಡಿದ್ದು, ಸದ್ಯ 750 ಕೋಟಿ ರೂ. ಬೆಲೆಬಾಳುವ ಆಸ್ತಿ ಎಂದು ಅಂದಾಜಿಸಲಾಗಿದೆ. ಆದರೆ, ಉದಯ್ ಗರುಡಾಚಾರ್ ಇದನ್ನು ದುರ್ಬಳಕೆ ಮಾಡಿಕೊಂಡು ಕಾನೂನು ಬಾಹಿರವಾಗಿ ಬ್ಯಾಂಕ್ ನಲ್ಲಿ ಅಡವಿಟ್ಟಿದ್ದಾರೆ ಎಂದು ದೂರು ದಾಖಲಿಸಲಾಗಿದೆ.


ಸಂಬಂಧಿತ ಟ್ಯಾಗ್ಗಳು

ACB RTI ಭ್ರಷ್ಟಾಚಾರ ಕಾನೂನು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ