ಇಬ್ಬಂದಿತನ ಏಕೆ?23-02-2018

ಬೆಂಗಳೂರು: ವಿದ್ವತ್ ಮೇಲೆ ಹಲ್ಲೆ ಪ್ರಕರಣ ಕುರಿತು ಮಾತನಾಡೋ ಬಿಜೆಪಿಯವರು, ಯಡಿಯೂರಪ್ಪ ಆಪ್ತ ಸಹಾಯಕ ಸಂತೋಷ್ ಮತ್ತು ಈಶ್ವರಪ್ಪ ಆಪ್ತ ಸಹಾಯಕ ವಿನಯ್ ಪ್ರಕರಣ ಕುರಿತು ಯಾಕೆ ಮಾತನಾಡಲ್ಲ ಎಂದು ಗೃಹಸಚಿವ ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಕ್ರೈಮ್ ರೇಟ್ ಶೇ. 7ರಿಂದ ಶೇ.5ಕ್ಕೆ ಇಳಿದಿರುವುದು, ಬಿಜೆಪಿ ಆಡಳಿತಾವಧಿಗಿಂತ ನಮ್ಮ ಆಡಳಿತ ಉತ್ತಮ ಅನ್ನುವುದನ್ನು ತಿಳಿಸುತ್ತದೆ ಎಂದು ಸಚಿವರು ಸಮರ್ಥಿಸಿಕೊಂಡಿದ್ದಾರೆ.

ನಲಪಾಡ್ ಹ್ಯಾರಿಸ್ ವಿಷಯದಲ್ಲಿ ಸರ್ಕಾರ ನಿಷ್ಪಕ್ಷಪಾತವಾಗಿ ಕ್ರಮ ಕೈಗೊಂಡಿದೆ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ ಎಂದು ಹೇಳುತ್ತಿರುವುದು ಕೇವಲ ಬಿಜೆಪಿಯವರ ಹುಯಿಲು ಎಂದು ತಳ್ಳಿಹಾಕಿದ ಸಚಿವ ರಾಮಲಿಂಗಾರೆಡ್ಡಿ, ಚುನಾವಣೆ ಉದ್ದೇಶದಿಂದ ಗಲಾಟೆ ಮಾಡುವುದಕ್ಕೆ ಅಮಿತ್ ಷಾ ಹೇಳಿದ್ದರೆಂದು ಸಂಸದ ಪ್ರತಾಪ್ ಸಿಂಹ ಹೇಳಿರಲಿಲ್ಲವೇ ಎಂದು ಕುಟುಕಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ