ಹಳೇ ಪ್ಲಾಸ್ಟಿಕ್‍ನ ಸಂಸ್ಕರಣ ಘಟಕಕ್ಕೆ ಬೆಂಕಿ.. ಅಪಾರ ನಷ್ಟ

Kannada News

01-05-2017 194

ಬೆಂಗಳೂರು : ರಾಜರಾಜೇಶ್ವರಿ ನಗರದ ಕೆಂಚನಹಳ್ಳಿಯಲ್ಲಿರುವ ಹಳೇ ಪ್ಲಾಸ್ಟಿಕ್‍ನ ಸಂಸ್ಕರಣ ಘಟಕಕ್ಕೆ ಭಾನುವಾರ ತಡರಾತ್ರಿ ಅಕಸ್ಮಿಕ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದೆ.
ಸಂಸ್ಕರಣ ಘಟಕದಲ್ಲಿ ರಾತ್ರಿ ಯಾರೂ ಇಲ್ಲದಿದ್ದರಿಂದ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಕೆಂಚನಹಳ್ಳಿಯಲ್ಲಿರುವ ಹಳೇ ಪ್ಲಾಸ್ಟಿಕ್ ಸಂಸ್ಕರಣ ಘಟಕಕ್ಕೆ ರಾತ್ರಿ 12ರ ವೇಳೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ತಗುಲಿದ ಇಲ್ಲವೇ, ಕುಡಿತದ ಅಮಲಿನಲ್ಲಿ ದುಷ್ಕರ್ಮಿ ಬೆಂಕಿ ಹಚ್ಚಿದ  ಬೆಂಕಿ ಸ್ವಲ್ಪ ಹೊತ್ತಿನಲ್ಲೇ ಇಡೀ ಘಟಕ ಆವರಿಸಿ ದಟ್ಟ ಹೊಗೆ ಹೊರಬರಲಾರಂಭಿಸಿದೆ.
ಬೆಂಕಿಯಿಂದ ಘಟಕದಲ್ಲಿದ್ದ ಹಳೆ ಪ್ಲಾಸ್ಟಿಕ್ ಸಂಸ್ಕರಣ ಯಂತ್ರಗಳು ರಾಸಾಯಿನಿಕ ಇನ್ನಿತರ ವಸ್ತುಗಳು ಸಂಪೂರ್ಣ ಬೆಂಕಿಗಾಹುತಿಯಾಗಿವೆ.ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಆಗ್ನಿಶಾಮಕದಳದ 12 ವಾಹನಗಳು ಮುಂಜಾನೆವರೆಗೆ ಶ್ರಮಿಸಿ ಬೆಂಕಿ ನಂದಿಸಿವೆ.
ಸಂಸ್ಕರಣ ಘಟಕದಲ್ಲಿ ರಾತ್ರಿ ಯಾರೂ ಇಲ್ಲದಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಕೆಂಗೇರಿ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ