ಜೈಲಿನಲ್ಲೂ ನಲಪಾಡ್ ಹ್ಯಾರಿಸ್ ಪುಂಡಾಟಿಕೆ…

fight between nalapad and his friend in prison

22-02-2018

ಬೆಂಗಳೂರು: ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ನ್ಯಾಯಾಂಗ ಬಂಧನದಲ್ಲಿರುವ ಶಾಸಕ ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್, ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ತನ್ನ ಜೊತೆಗಿದ್ದ ಸ್ನೇಹಿತನ ಮೇಲೆಯೇ ಹಲ್ಲೆ ನಡೆಸಿ ಪುಂಡಾಟಿಕೆ ನಡೆಸಿದ್ದಾನೆ.

ಯುಬಿ ಸಿಟಿಯ ಫರ್ಜಿ ಕೆಫೆ ರೆಸ್ಟೋರೆಂಟ್ ನಲ್ಲಿ ವಿದ್ವತ್ ಮೇಲೆ ಹಲ್ಲೆ ಪ್ರಕರಣದ ಐದನೇ ಆರೋಪಿಯಾಗಿರುವ ಅಬ್ರಾಸ್ ನಾನು ಜೈಲಿಗೆ ಬರುವಂತಾಗಲು ನೀನೇ ಕಾರಣ ಎಂದು ಕೋಪದಿಂದ ನಲಪಾಡ್ ಗೆ ಬೈದಿದ್ದಾನೆ. ಈ ವಿಚಾರವಾಗಿ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು, ಅಬ್ರಾಸ್ ಮೇಲೆ ನಲಪಾಡ್ ಹ್ಯಾರಿಸ್ ಹಲ್ಲೆ ಮಾಡಿದ್ದಾನೆ.

ಮಧ್ಯರಾತ್ರಿ 1.30ರ ಸುಮಾರಿಗೆ ತಾವಿದ್ದ ಕೊಠಡಿಯಲ್ಲೇ ಇಬ್ಬರೂ ಬಡಿದಾಡಿಕೊಂಡಿದನ್ನು ತಿಳಿದು ಸ್ಥಳಕ್ಕೆ ಬಂದ ಜೈಲು ಅಧಿಕಾರಿಗಳು, ಇಬ್ಬರನ್ನೂ ಸುಮ್ಮನಿರಿಸಿ ಅಬ್ರಾಸ್ ನನ್ನು ಬೇರೊಂದು ಸೆಲ್ ಗೆ ವರ್ಗಾಯಿಸಿದ್ದಾರೆ. ಗಲಾಟೆ ಹಿನ್ನೆಲೆಯಲ್ಲಿ, ಮಹಮ್ಮದ್ ನಲಪಾಡ್ ಇರುವ ಬ್ಯಾರಕ್ ಬಳಿ ಭದ್ರತೆ ಹೆಚ್ಚಿಸಲಾಗಿದ್ದು, ಆತನ ಗೆಳೆಯರ ಗ್ಯಾಂಗನ್ನು ದೂರದ ಬ್ಯಾರಕ್ ಗಳಿಗೆ ವರ್ಗಾಯಿಸಲಾಗಿದೆ.


ಸಂಬಂಧಿತ ಟ್ಯಾಗ್ಗಳು

MLA Haris Nalapad ಆರೋಪಿ ಬ್ಯಾರಕ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ