‘ಯುದ್ಧ’ ಸಾರಿದ ಯಡಿಯೂರಪ್ಪ...

yeddyurappa

22-02-2018

ಹಾವೇರಿ: ದಲಿತರ ಹಣದಲ್ಲಿ ಸಾಲ ಮನ್ನಾ ಮಾಡಲು ನಿಮಗೆ ನಾಚಿಕೆ ಆಗುವುದಿಲ್ಲವೇ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕಿಡಿಕಾರಿದ್ದಾರೆ. ಹಾವೇರಿ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಏಕ ವಚನದಲ್ಲೇ ಹರಿಹಾಯ್ದ ಬಿ ಎಸ್ ವೈ, ‘ಜನರ ಜೀವದ ಜೊತೆಗೆ ಚೆಲ್ಲಾಟ ಆಡುವ ನಿನ್ನನ್ನು ಬಿಡುವುದಿಲ್ಲ. ಬೊಕ್ಕಸ ಕೊಳ್ಳೆ ಹೊಡೆಯಲೂ ಬಿಡುವುದಿಲ್ಲ, ಇದರ ವಿರುದ್ಧ ಬಿಜೆಪಿ ಬೀದಿಗಿಳಿದು ಹೋರಾಟ ಮಾಡಲಿದೆ’ ಎಂದರು. 

ಪ್ರಚಾರಕ್ಕೆಂದೇ ಕಾಂಗ್ರೆಸ್ ಸರ್ಕಾರ ಮೊತ್ತ ಹೆಚ್ಚಳ ಮಾಡಿದೆ ಎಂದು ದೂರಿದ ಯಡಿಯೂರಪ್ಪನವರು, ರಾಜ್ಯದ ಮುಖ್ಯಮಂತ್ರಿಯಾಗಿ ಹಗಲು ದರೋಡೆ ಮಾಡುತ್ತಿರುವ ನಿನಗೆ ನಾಚಿಕೆಯಾಗಬೇಕು. ನೀನೇನು ಸತ್ಯ ಹರಿಶ್ಚಂದ್ರನಾ? ಎಂದು ಪ್ರಶ್ನಿಸಿದರು. ನೀವು ಜೈಲಿಗೆ ಹೋಗಿ ಬಂದ ಮುಖ್ಯಮಂತ್ರಿ ಎಂಬ ಸಿದ್ದರಾಮಯ್ಯ ಮಾತಿಗೆ ತಿರುಗೇಟು ನೀಡಿರುವ ಯಡಿಯೂರಪ್ಪ, ‘ನಿಮ್ಮ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಬೇಲ್ ಮೇಲೆ ಹೊರಗಡೆ ಇದ್ದಾರೆ, ನಾನು ಅಧಿಕಾರಕ್ಕೆ ಬಂದ ತಕ್ಷಣ ನಿಮ್ಮ ಅವ್ಯವಹಾರ ಬಯಲಿಗೆ ತಂದು ನಿಮ್ಮನ್ನು ಜೈಲಿಗೆ ಅಟ್ಟುತ್ತೇನೆ’ ಎಂದು ಗುಡುಗಿದರು.


ಸಂಬಂಧಿತ ಟ್ಯಾಗ್ಗಳು

B.S.Yeddyurappa Siddaramaiah ಸೋನಿಯಾ ಗಾಂಧಿ ದರೋಡೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ