ಕ್ಯಾನ್ಸರ್ ನೋವಲ್ಲೇ ಮಹಿಳೆ ಆತ್ಮಹತ್ಯೆ

women suicide due to cancer

22-02-2018

ಬೆಂಗಳೂರು: ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಮನೆಯ ಮುಂಭಾಗದ ಸಂಪ್‍ಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ರಾಜಗೋಪಾಲ ನಗರದಲ್ಲಿ ನಡೆದಿದೆ. ರಾಜಗೋಪಾಲ್ ನಗರದ ಪುಟ್ಟಮ್ಮ(62) ಮೃತ ಮಹಿಳೆ. ಕ್ಯಾನ್ಸರ್‍ ಕೊನೆಯ ಹಂತದಲ್ಲಿದ್ದ ಅವರಿಗೆ ವೈದ್ಯರು ಚಿಕಿತ್ಸೆ ನೀಡದೆ ಮನೆಗೆ ಕಳುಹಿಸಿದ್ದರು. ಕ್ಯಾನ್ಸರ್ ಗುಣಮುಖವಾಗದೆ ಸಾವಿನ ದಿನ ಎಣಿಸುತ್ತಿದ್ದ ಪುಟ್ಟಮ್ಮ ಅವರು ಅದೇ ನೋವಿನಲ್ಲಿ ನಿನ್ನೆ ರಾತ್ರಿ ಮನೆಯ ಮುಂಭಾಗವಿದ್ದ ಸಂಪ್‍ಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜಗೋಪಾಲ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

suicide tank ಕ್ಯಾನ್ಸರ್ ಆತ್ಮಹತ್ಯೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ