ಬಂಡವಾಳ ಹೂಡಿಕೆ ಆಕರ್ಷಣೆಯಲ್ಲಿ ನಂ.1

No.1 in Investment Attraction

22-02-2018

ವಿಧಾನ ಮಂಡಲದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಉತ್ತರದ ಮುಖ್ಯಾಂಶಗಳು:

►ಬಂಡವಾಳ ಹೂಡಿಕೆಯಲ್ಲಿ ನಾವು ಮೊದಲ ಸ್ಥಾನದಲ್ಲಿದ್ದೇವೆ. ಇದರಿಂದ 13 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ಇದು ಗುಜರಾತ್ ನಲ್ಲಿ ಏಕೆ ಸಾಧ್ಯವಾಗಿಲ್ಲ. ನಮಗೆ ಬಂದಿರುವ ಹೂಡಿಕೆಯಲ್ಲಿ ಶೇ.50ರಷ್ಟೂ ಗುಜರಾತ್ ನಲ್ಲಿ ಆಗಿಲ್ಲ.
►ಸಾರಿಗೆ ಇಲಾಖೆಯಲ್ಲಿ 105ಕ್ಕೂ ಹೆಚ್ಚು ಪ್ರಶಸ್ತಿಗಳು ಕೇಂದ್ರದಿಂದಲೇ ಬಂದಿವೆ. ಟೇಕಾಫ್ ಆಗದ, ನಿಷ್ಕ್ರಿಯ ಸರ್ಕಾರಕ್ಕೆ ಇಷ್ಟು ಪ್ರಶಸ್ತಿ ಬರಲು ಹೇಗೆ ಸಾಧ್ಯಜಿಡಿಪಿ ಬೆಳವಣಿಗೆ ಕಳೆದ ಸಾಲಿನಲ್ಲಿ 7.5 ಈ ಸಾಲಿನಲ್ಲಿ 8.5. ಇದು ಕೇಂದಕ್ಕಿಂತ ಹೆಚ್ಚು. ನಿಷ್ಕ್ರಿಯ ಸರ್ಕಾರ ಈ ಸಾಧನೆ ಮಾಡಲು ಸಾಧ್ಯವೇ?►ಸರ್ಕಾರ ಹೆಚ್ಚು ಸಾಲ ಮಾಡಿದೆ, ರಾಜ್ಯ ದಿವಾಳಿ ಆಗಿದೆ ಎನ್ನುತ್ತಾರೆ. ಆದರೆ ನಾವು ವಿತ್ತೀಯ ಶಿಸ್ತು ಮೀರಿಲ್ಲ. ಸಾಲ ಶೇ. 25 ಮೀರಬಾರದು ಎಂದಿದೆ. ಆದರೆ ಶೇ.19ಕ್ಕಿಂತ ಕಡಿಮೆ ಇದೆ. ರಾಜ್ಯ ದಿವಾಳಿ ಆಗಲು ಹೇಗೆ ಸಾಧ್ಯ.
►ಆರ್ಥಿಕ ತಜ್ಞರೂ ಆಗಿರುವ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ರಾಜ್ಯದ ಹಣಕಾಸು ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
►ಕೇಂದ್ರ ದುಡ್ಡು ಕೊಟ್ಟಿದೆ, ಅದರ ಖರ್ಚಿನ ಲೆಕ್ಕ ಕೊಡಿ ಎನ್ನುತ್ತಾರೆ. ಈಗ ಲೆಕ್ಕ ಕೊಡುತ್ತಿಲ್ಲವೇ. ಕೇಂದ್ರ ಅನುದಾನ ಕೊಟ್ಟಿದೆ. ಅದನ್ನು ರಾಜ್ಯ ತಿಂದು ಹಾಕಿದೆ ಎಂದು ಸುಳ್ಳು ಹೇಳಬಾರದು. ಕೇಂದ್ರ ಸರ್ಕಾರ ಕೊಡುವುದು ನಮ್ಮ ತೆರಿಗೆ ಹಣವನ್ನೇ ಹೊರತು ಯಾರೂ ಕೈನಿಂದ ಕೊಡುವುದಿಲ್ಲ. ►ಕೇಂದ್ರದಿಂದ ಬರಬೇಕಾದ ಅನುದಾನದಲ್ಲಿ 10,500 ಕೋಟಿ ರೂಪಾಯಿಗಳಷ್ಟು ಖೋತಾ ಆಗಿದೆ. ಈ ಬಗ್ಗೆ ನಾವು ಯಾರನ್ನು ಕೇಳಬೇಕು.?ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ