ಸಿಂಗಾಪುರಕ್ಕೆ ವಿದ್ವತ್? 

Vidwath may shift to singapore?

22-02-2018

ಬೆಂಗಳೂರು: ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಮತ್ತು ಗ್ಯಾಂಗ್ ನಿಂದ ಮಾರಣಾಂತಿಕ ಹಲ್ಲೆಗೊಳಗಾದ ವಿದ್ವತ್ ಗೆ ಮಲ್ಯ ಆಸ್ಪತ್ರೆ ಐಸಿಯು ನಲ್ಲಿ ಚಿಕಿತ್ಸೆ ಮುಂದುವರೆದಿದೆ. ತೀವ್ರ ಜ್ವರದಿಂದ ಬಳಲುತ್ತಿರುವ ವಿದ್ವತ್, ಆಹಾರ ಸೇವಿಸಲಾಗದ ಸ್ಥಿತಿಯಲ್ಲಿದ್ದಾರೆ, ಪಕ್ಕೆಲುಬು ಮುರಿದಿರುವುದರಿಂದ ಕೂರುವುದಕ್ಕೂ ಆಗುತ್ತಿಲ್ಲ ಎಂದು ವಿದ್ವತ್ ಅಣ್ಣ ಸಾತ್ವಿಕ್ ಮಾಹಿತಿ ನೀಡಿದ್ದಾರೆ. ಡಾ.ಆನಂದ್ ಮತ್ತು ತಂಡ ವಿದ್ವತ್ ಗೆ ಚಿಕಿತ್ಸೆ ನೀಡುತ್ತಿದೆ. ಆದರೆ, ವಿದ್ವತ್ ಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ಸಿಂಗಾಪುರಕ್ಕೆ ಕರೆದೊಯ್ಯುವ ಬಗ್ಗೆ ಕುಟುಂಬ ವರ್ಗ ಚಿಂತನೆ ನಡೆಸಿದೆ.


ಸಂಬಂಧಿತ ಟ್ಯಾಗ್ಗಳು

Vidwath Singapore ಹ್ಯಾರಿಸ್ ನಲಪಾಡ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ