ನಕಲಿ ಚೆಕ್ ಬಳಸಿ ವಂಚನೆ ಯತ್ನ ವಿಫಲ

Fake Check: 4 people arrest

22-02-2018

ಬೆಳಗಾವಿ: ನಕಲಿ ಚೆಕ್ ನೀಡಿ ಬ್ಯಾಂಕ್ ಗೆ 2.72 ಕೋಟಿ ರೂಪಾಯಿ ವಂಚನೆಗೆ ಯತ್ನಿಸಿರುವ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶ ಸರ್ಕಾರದ ಹೆಸರಿನಲ್ಲಿ ನಕಲಿ ಚೆಕ್ ತಯಾರಿಸಿ ವಂಚನೆಗೆ ಯತ್ನಿಸಿದ ಶಶಿಧರ್ ನಾಗನೂರ, ನಾರಾಯಣ ಶೆಟ್ಟಿ, ಮಹ್ಮದ್ ಗೌಸ್, ಅರೀಫ್ ಪಾಟೀಲ್ ಬಂಧಿತರು. ಹನುಮಾನ್ ನಗರ ಎಸ್.ಬಿ.ಐ ಶಾಖೆಯಲ್ಲಿ, ಉತ್ತರ ಪ್ರದೇಶದ ಗ್ರಾಮೀಣ ರೋಜ್ ಗಾರ್ ಯೋಜನೆ ಸಮಿತಿ ಹೆಸರಿನಲ್ಲಿ ನಕಲಿ ಚೆಕ್ ಸೃಷ್ಟಿಸಿದ್ದ ಕಳ್ಳರು, 2.72 ಕೋಟಿ ರೂ. ಮೊತ್ತ ನಮೂದಿಸಿ ತಮ್ಮ ಹೆಸರಿನಲ್ಲಿರುವ ಲೋಗಾನ ಮಾರ್ಕೆಟಿಂಗ್ ಖಾತೆಗೆ ಜಮಾ ಮಾಡಲು ನೀಡಿದ್ದರು. ಈ ಖಾತೆಗೆ ಹಣ ಜಮಾ ಆದ ನಂತರ, ಆರೋಪಿಗಳು ತಮ್ಮ ತಮ್ಮ ಖಾತೆಗೆ ಹಣ ಜಮಾ ಮಾಡಿಕೊಳ್ಳಲು ಮತ್ತೆ ಚೆಕ್ ನೀಡಿದ್ದರು. ಇದರಿಂದ ಸಂಶಯಗೊಂಡ ಬ್ಯಾಂಕ್ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು, ಬ್ಯಾಂಕ್ ಸಿಬ್ಬಂದಿ ಎಪಿಎಂಸಿ ಠಾಣೆಗೆ ದೂರು ಸಲ್ಲಿಸಿದ ಬಳಿಕ ಪ್ರಕರಣದ ಬೆನ್ನುಹತ್ತಿದ ಪೋಲಿಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಂದು ಕಾರು, 5 ಮೊಬೈಲ್ ಫೋನ್ ಮತ್ತು ಖಾಲಿ ಚೆಕ್ ಗಳನ್ನು ವಶಪಡಿಸಿಕೊಂಡು ವಿಚಾರಣೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Bank Uttar Pradesh ನಕಲಿ ಮೊಬೈಲ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ