ಶಿಷ್ಟಾಚಾರ ಉಲ್ಲಂಘನೆ?

Etiquette violation?

22-02-2018

ಹಾಸನ: ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಹಾಸನ ಜಿಲ್ಲಾಧಿಕಾರಿ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂದು ರಾಜಭವನದಿಂದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರಿಗೆ ದೂರು ಸಲ್ಲಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ರಾಷ್ಟ್ರಪತಿ, ರಾಜ್ಯಪಾಲರು, ಪ್ರಧಾನ ಮಂತ್ರಿಯವರು ಭಾಗವಹಿಸಿದ್ದ ಮಹಾಮಸ್ತಕಾಭಿಷೇಕದ ಕಾರ್ಯಕ್ರಮಗಳಲ್ಲಿ ಜಿಲ್ಲಾಧಿಕಾರಿ, ರೋಹಿಣಿ ಸಿಂಧೂರಿ ಶಿಷ್ಟಚಾರ ಉಲ್ಲಂಘಿಸಿ, ಗಣ್ಯರಿಗೆ ಸರಿಸಮಾನವಾಗಿ ನಿಂತಿದ್ದರು ಎನ್ನಲಾಗಿದೆ. ಕಾರ್ಯಕ್ರಮ ಆಯೋಜನೆ, ಆಸನ ವ್ಯವಸ್ಥೆ, ಗಣ್ಯರನ್ನು ಬರಮಾಡಿಕೊಳ್ಳುವ ಮತ್ತು ವೇದಿಕೆಯ ಸಂಪೂರ್ಣ ಹೊಣೆ ಜಿಲ್ಲಾಧಿಕಾರಿಯದ್ದೇ ಆಗಿರುತ್ತದೆ, ಹೀಗಿರುವಾಗ, ಜಿಲ್ಲಾಧಿಕಾರಿ ರೋಹಿಣಿ ಅವರು ಸರಿಯಾದ ರೀತಿಯಲ್ಲಿ ಜವಾಬ್ದಾರಿ ನಿರ್ವಹಿಸಿಲ್ಲ ಎಂದು ದೂರು ನೀಡಲಾಗಿದೆ.


ಸಂಬಂಧಿತ ಟ್ಯಾಗ್ಗಳು

Rohini Sindhuri protocol ಕಾರ್ಯದರ್ಶಿ ಜವಾಬ್ದಾರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ