ಗಂಡನಿಂದಲೇ ಹೆಂಡತಿ ಕೊಲೆ ಯತ್ನ

husband attempt to murder his wife

21-02-2018

ಬೆಂಗಳೂರು: ಪೀಣ್ಯದ ಪಿಇಎಸ್ ಕ್ರಾಸ್ ಬಳಿ ಕೌಟುಂಬಿಕ ಮನಸ್ಥಾಪ ಹಿನ್ನೆಲೆ ಪತಿಯೇ ಪತ್ನಿಯ ತಲೆಗೆ ಕಲ್ಲಿನಿಂದ ಹೊಡೆದು ಕೊಲೆ ಮಾಡುವ ಯತ್ನ ನಡೆಸಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.

ನಂದಿನಿ ಲೇಔಟ್‍ನ ಜಯಮಾರುತಿ ನಗರದ ಅಶ್ವಿನಿ (30) ತಲೆಗೆ ಕಲ್ಲಿನಿಂದ ಹೊಡೆದು ಕೊಲೆಗೆ ಯತ್ನಿಸಿದ ರಾಜಣ್ಣ (42)ನನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ. ಗಾಯಗೊಂಡಿರುವ ಆಶ್ವಿನಿ ಸ್ಥಿತಿ ಗಂಭೀರವಾಗಿದೆ. ಪೇಂಟಿಂಗ್ ಕೆಲಸ ಮಾಡುತ್ತಿದ್ದ ರಾಜಣ್ಣ, 10 ವರ್ಷಗಳ ಹಿಂದೆ ಅಶ್ವಿನಿಯನ್ನು ಮದುವೆಯಾಗಿದ್ದು, ದಂಪತಿಗೆ ಮಗಳಿದ್ದಾಳೆ. ಪತ್ನಿಯನ್ನು ನಿನ್ನೆ ಮಧ್ಯಾಹ್ನ ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದ ರಾಜಣ್ಣ, ಪಿಇಎಸ್ ಕಾಲೇಜು ಬಳಿ ಕಾರು ನಿಲ್ಲಿಸಿ ವಾಗ್ವಾದ ನಡೆಸಿದ್ದಾನೆ. ಕಾರಿನಿಂದ ಕೆಳಗಿಳಿಸಿದ ಅಶ್ವಿನಿ ತಲೆಗೆ ಕಲ್ಲಿನಿಂದ ಹೊಡೆದು ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಅಶ್ವಿನಿಯನ್ನು ಸ್ಪರ್ಶ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿರುವ ಪೀಣ್ಯ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಚೇತನ್ ಸಿಂಗ್ ರಾಥೋಡ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

wife hospital ದಂಪತಿ ಪರಾರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ