ಕುಲಪತಿಗಳ ನೇಮಕಕ್ಕೆ ಆಗ್ರಹ

Demand for the appointment of chancellors

21-02-2018

ಬೆಂಗಳೂರು: ಕಾನೂನು ವಿಶ್ವವಿದ್ಯಾಲಯಕ್ಕೆ ಕೂಡಲೆ ಕುಲಪತಿಗಳನ್ನು ನೇಮಿಸಬೇಕು. ಗುಣಮಟ್ಟದ ಶಿಕ್ಷಣ ಜಾರಿಗೊಳಿಸಬೇಕು. ಪಾರದರ್ಶಕ ಮರು ಮೌಲ್ಯಮಾಪನ ಮಾಡಬೇಕು ಎಂಬ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರದ ಕಾನೂನು ಕಾಲೇಜುಗಳ ವಿದ್ಯಾರ್ಥಿಗಳು ನಗರದಲ್ಲಿ  ಪ್ರತಿಭಟನೆ ನಡೆಸಿದರು.

ಪುರಭವನದ ಮುಂಭಾಗ ಸೇರಿದ  ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎ.ಬಿ.ವಿ.ಪಿ) ಕಾರ್ಯಕರ್ತರು ವಿದ್ಯಾರ್ಥಿಗಳು ಕಳೆದ ನಾಲ್ಕು ವರ್ಷಗಳಿಂದ ಕಾನೂನು ವಿಶ್ವವಿದ್ಯಾಲಯದಲ್ಲಿ ಕುಲಪತಿಗಳೇ ಇಲ್ಲದೆ ಮುರುಕಲು ಮನೆಯಾಗಿದೆ. ಹಂಗಾಮಿ ಕುಲಪತಿಗಳ ಮೂಲಕ ಕಾರ್ಯನಿರ್ವಹಿಸುತ್ತಿರುವುದನ್ನು ಕೈಬಿಟ್ಟು ಕೂಡಲೇ ಕುಲಪತಿಗಳನ್ನು ನೇಮಿಸಬೇಕು ಎಂದು ಆಗ್ರಹಿಸಿದರು. ಪಾರದರ್ಶಕ ಮೌಲ್ಯಮಾಪನ ಜಾರಿಗೊಳಿಸಬೇಕು. ಸಾಮಾನ್ಯ ಪರೀಕ್ಷಾ ಫಲಿತಾಂಶವನ್ನು ಪಾರದರ್ಶಕವಾಗಿ ಮಾಡಬೇಕು. ಮರು ಮೌಲ್ಯಮಾಪನಕ್ಕೆ ಪ್ರಾದೇಶಿಕ ಕಛೇರಿಗಳನ್ನು ಸ್ಥಾಪಿಸಬೇಕು. ಕನ್ನಡದಲ್ಲಿ ಪಠ್ಯ ಪುಸ್ತಕಗಳು ದೊರೆಯುವಂತೆ ಮಾಡಬೇಕು ಮುಂತಾದ 6 ಬೇಡಿಕೆಗಳನ್ನು ಈಡೇರಿಸುವಂತೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎ.ಬಿ.ವಿ.ಪಿ ಯ ರಾಜ್ಯ ಕಾರ್ಯದರ್ಶಿ ಹರ್ಷನಾರಾಯಣ ಅವರು ಬೇಡಿಕೆಗಳನ್ನು ಈಡೇರಿಸುವವರೆಗೂ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

chancellors law university ಪಾರದರ್ಶಕ ಪಠ್ಯ ಪುಸ್ತಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ