ಖಾಸಗಿ ಐಟಿಐ ಶಿಕ್ಷಕರ ಪ್ರತಿಭಟನೆ

Private ITI Teachers protest

21-02-2018

ಬೆಂಗಳೂರು: ಸಿಬ್ಬಂದಿ ಆಧಾರಿತ ವೇತನ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿ ಕೈಗಾರಿಕಾ ತರಬೇತಿ ಕೇಂದ್ರ (ಐ.ಟಿ.ಐ) ಗಳ ಶಿಕ್ಷಕರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಪುರಭವನದ ಮುಂಭಾಗ ಕರ್ನಾಟಕ ರಾಜ್ಯ ಖಾಸಗಿ ಐ.ಟಿ.ಐ ಗಳ ಅನುದಾನ ಹೋರಾಟ ಸಮನ್ವಯ ಸಮಿತಿಯ ಕಾರ್ಯಕರ್ತರು ಶಿಕ್ಷಕರು ಸೇರಿ ಸಿಬ್ಬಂದಿ ಆಧಾರಿತ ವೇತನಕ್ಕಾಗಿ 8 ವರ್ಷಗಳಿಂದ ಹೋರಾಟ ನಡೆಸುತ್ತಲೇ ಇದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಎಂದು ಆರೋಪಿಸಿದರು.

ಎನ್.ಸಿ.ವಿ.ಟಿ ಯಿಂದ ಸಂಯೋಜನೆಗೊಂಡು 7 ವರ್ಷ ಸೇವೆ ಪೂರೈಸಿರುವ ಶಿಕ್ಷಕರಿಗೆ ಸಿಬ್ಬಂದಿ ಆಧಾರಿತ ವೇತನ ನೀಡಬೇಕೆಂದು ನಿಯಮವೇ ಇದೆ. ಅದನ್ನು ಅನುಸರಿಸಲಾಗುತ್ತಿಲ್ಲ. ಜೊತೆಗೆ ಈ ಬಗ್ಗೆ ಸರ್ಕಾರ ಪರಿವೀಕ್ಷಣೆ ನಡೆಸಿದ್ದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ. ಕೇವಲ 4 ಸಾವಿರದಿಂದ 5 ಸಾವಿರ ರೂ.ಗಳ ಅಲ್ಪ ಸಂಬಳಕ್ಕೆ ಶಿಕ್ಷಕರನ್ನು ದುಡಿಸಿಕೊಳ್ಳಲಾಗುತ್ತಿದೆ. ಅವರುಗಳು ಸುಮಾರು 20 ವರ್ಷಗಳಿಂದ ಭವಿಷ್ಯವಿಲ್ಲದ ಅತಂತ್ರ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ. 2 ಸಾವಿರದಿಂದ ಅನುದಾನ ಕೂಡ ಕೊಟ್ಟಿಲ್ಲ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಮಿತಿಯ ಸಂಚಾಲಕ ಪಿ.ಇ. ಆರಾಧ್ಯಮಠ ದೂರಿದರು.

ರಾಜ್ಯದಲ್ಲಿ ಸುಮಾರು 3 ಸಾವಿರ ಶಿಕ್ಷಕರು ಐ.ಟಿ.ಐ ನಲ್ಲಿ ಸಿಬ್ಬಂದಿ ಆಧಾರಿತ ವೇತನ ಇಲ್ಲದೆ ಸೇವೆ ಸಲ್ಲಿಸುತ್ತಿದ್ದಾರೆ. ಸರ್ಕಾರ ನೀಡಲು ಉದ್ದೇಶಿಸಿರುವ ವಿದ್ಯಾರ್ಥಿ ಕೇಂದ್ರೀಕೃತ ಅನುದಾನ ಬೇಡ. ಎನ್ನುವುದು ಅವರ ಬೇಡಿಕೆಯಾಗಿದೆ. ನಮಗೆ ನ್ಯಾಯ ಕೊಡಿ, ಅನುದಾನ ನೀಡಿ ಜೀವ ಉಳಿಸಿ ಎಂಬ ಫಲಕಗಳನ್ನು ಹಿಡಿದು ನ್ಯಾಯಕ್ಕಾಗಿ ಘೋಷಣೆ ಮಾಡುತ್ತ ಶಿಕ್ಷಕರು ಪ್ರತಿಭಟನೆ ನಡೆಸಿದರು.


ಸಂಬಂಧಿತ ಟ್ಯಾಗ್ಗಳು

ITI Teachers ನ್ಯಾಯ ವೇತನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ