ಅನುದಾನ ಬಿಡುಗಡೆ ಸಂಬಂಧ ಸಮಿತಿ ರಚನೆ…

To release grants government set a committee

21-02-2018

ಬೆಂಗಳೂರು: ಹೊಸದಾಗಿ ಅನುದಾನಕ್ಕೊಳಪಟ್ಟ ಶಾಲೆಗಳ ಸಿಬ್ಬಂದಿಗೆ ವೇತನ ನೀಡಲು 5,600 ಕೋಟಿ ರೂಪಾಯಿ ಅಗತ್ಯವಿರುವುದರಿಂದ ಆ ಬಗ್ಗೆ ಮತ್ತೊಮ್ಮೆ ಪರಿಶೀಲಿಸಲು ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಹೆಬ್ಬಾಳ ಬಿಜೆಪಿ ಶಾಸಕ ವೈ.ಎ.ನಾರಾಯಣಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅನುದಾನಿತ ಶಾಲೆಗಳ ಸಿಬ್ಬಂದಿಗೆ ವೇತನ ನೀಡಲು ಸರ್ಕಾರ ಈ ಪ್ರಮಾಣದ ಹಣ ವ್ಯಯಿಸಬೇಕು. ಇದು ಬಿಜೆಪಿ ಸರ್ಕಾರದ ಅವಧಿಯಲ್ಲೇ ಕೇಳಿ ಬಂದ ಸಮಸ್ಯೆ. ಅವರು, ಸಮಿತಿ ರಚಿಸಿ ಕೈ ತೊಳೆದುಕೊಂಡರು.
ಆದರೆ, ನಾವು ವರದಿ ಪಡೆದು ಅದನ್ನು ವಿಧಾನಪರಿಷತ್ತಿನಲ್ಲಿ ಮಂಡಿಸಿದ್ದೇವೆ, ಸಮಿತಿ ಶಿಫಾರಸಿನ ಪ್ರಕಾರ 5,600 ಕೋಟಿ ರೂಪಾಯಿ ನೀಡುವುದು ಸುಲಭವಲ್ಲ. ಹೀಗಾಗಿ ಮತ್ತೆ ಪರಿಶೀಲಿಸಲು, ನಾನು ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರೂ ಇರುವ ಸಮಿತಿ ರಚಿಸಲಾಗಿದೆ ಎಂದರು. ಸರ್ಕಾರ ಯಾವಾಗ ಒಂದು ಸಂಸ್ಥೆಗೆ ಅನುದಾನ ನೀಡಿತು ಎಂಬುದರ ವಿವರ ನಮ್ಮ ಬಳಿ ಇರುತ್ತದೆ. ಆದರೆ, ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗೆ ಸದರಿ ಉದ್ಯೋಗಿ ಯಾವಾಗ ಸೇರ್ಪಡೆಯಾದರು ಎಂಬ ವಿವರ ಗೊತ್ತಿರುವುದಿಲ್ಲ ಎಂದರು. ಹೀಗಾಗಿ, ಎಲ್ಲ ಅಂಶಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ, ಈ ವಿಷಯದಲ್ಲಿ ಸರ್ಕಾರದ ಬದ್ಧತೆಯನ್ನು ಯಾರೂ ಪ್ರಶ್ನಿಸುವುದು ಬೇಡ ಎಂದು ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Tanveer Sait Secondary education ಸಿಬ್ಬಂದಿ ಸಮಿತಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ