ಪ್ರಧಾನಿ ಮೋದಿ ವಿರುದ್ಧ ಆಕ್ರೋಶ

Outrage against modi...

21-02-2018

ಬಾಗಲಕೋಟೆ: ರಾಜ್ಯ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ಮಾಡಿರುವ ಭ್ರಷ್ಟಾಚಾರದ ಆರೋಪಕ್ಕೆ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್ ಆಕ್ರೋಶಗೊಂಡಿದ್ದಾರೆ. ಟೆನ್ ಪರ್ಸೆಂಟ್ ಸರ್ಕಾರ ನಮ್ಮದಾಗಿದ್ದರೆ ಕಿತ್ತುಹಾಕಿ, ಇಲ್ಲವೇ ಸಿಬಿಐ ತನಿಖೆಗೆ ಕೊಡಿ ಎಂದು ಸವಾಲೆಸೆದಿದ್ದಾರೆ.
ಮೋದಿ ಮತ್ತು, ಅಮಿತ್ ಷಾಗೆ ಈಗಾಗಲೇ ಢವ ಢವ ಶುರುವಾಗಿದೆ. ಅದಕ್ಕಾಗಿ ಅವರಿಬ್ಬರೂ ಕರ್ನಾಟಕಕ್ಕೆ ಓಡೋಡಿ ಬರುತ್ತಿದ್ದಾರೆ ಎಂದು ಮುಧೋಳದಲ್ಲಿ ತಿಮ್ಮಾಪುರ್ ವ್ಯಂಗ್ಯವಾಡಿದರು. ಈ ರೀತಿ ಮೂಲೆ ಮೂಲೆ ತಿರುಗುವಂಥ ಪ್ರಧಾನಿಯನ್ನು ನಾನು ಎಂದೂ ನೋಡಿಲ್ಲ, ಮೋದಿ ಅವರು ದೇಶದ ಪ್ರಧಾನಿಯಾಗಿರಬೇಕು, ಆದರೆ ಅವರು ಬಿಜೆಪಿ ಪ್ರಧಾನಿಯಾಗಿದ್ದಾರೆ ಎಂದು ಕುಟುಕಿದರು. ಹ್ಯಾರಿಸ್ ಪುತ್ರನ ಗೂಂಡಾಗಿರಿ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ಯಾರೇ ತಪ್ಪು ಮಾಡಿದರೂ ತಪ್ಪು ತಪ್ಪೇ, ನನ್ನ ಮಗನೇ ತಪ್ಪು ಮಾಡಲಿ, ಇನ್ನೊಬ್ಬರ ಮಗನೇ ತಪ್ಪು ಮಾಡಲಿ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ, ಬಿಜೆಪಿಯವರು ಸಣ್ಣ ಪುಟ್ಟ ವಿಷಯಗಳನ್ನು ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿದರು.


ಸಂಬಂಧಿತ ಟ್ಯಾಗ್ಗಳು

R.b.timmapur Excise ಪ್ರಧಾನಿ ಗೂಂಡಾಗಿರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ