ವಿದ್ಯುತ್ ಶಾಕ್ ಗೆ ಶಿಕ್ಷಕಿ ಬಲಿ

current shock: teacher died

21-02-2018

ರಾಯಚೂರು: ವಿದ್ಯುತ್ ಶಾಕ್ ಹೊಡೆದು ಶಿಕ್ಷಕಿಯೊಬ್ಬರು ಮೃತಪಟ್ಟಿದ್ದಾರೆ. ಚಿಕ್ಕಮಗಳೂರಿನ ಕಡೂರು ಮೂಲದ ಶೈಲಜಾ(33)ಮೃತ ಶಿಕ್ಷಕಿ. ರಾಯಚೂರಿನ ಸಿರವಾರ ಪಟ್ಟಣದಲ್ಲಿ ಘಟನೆ ನಡೆದಿದೆ. ಶಿಕ್ಷಕಿ ತನ್ನ ಮನೆಯಲ್ಲಿ ಸ್ವಿಚ್ ಹಾಕುವ ವೇಳೆ ವಿದ್ಯುತ್ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈಕೆ ದೇವದುರ್ಗ ತಾಲ್ಲೂಕಿನ ಜಾಡಲದಿನ್ನಿ ಗ್ರಾಮದ ಶಾಲೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತಿದ್ದರು ಎಂದು ತಿಳಿದು ಬಂದಿದೆ. ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

Teacher death ವಿದ್ಯುತ್ ಗ್ರಾಮ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ