ಬ್ಯಾಂಕ್ ವಿರುದ್ಧ ಸಿಡಿದೆದ್ದ ಗ್ರಾಹಕರು

Consumers protest against the bank

21-02-2018

ಆನೇಕಲ್: ಗ್ರಾಹಕರಿಗೆ ಸಾಲ ನೀಡದ ಸಿಂಡಿಕೇಟ್ ಬ್ಯಾಂಕ್ ವಿರುದ್ಧ ಗ್ರಾಹಕರು ಸಿಡಿದೆದ್ದಿದ್ದಾರೆ. ಬೆಂಗಳೂರು ಗ್ರಾಮಾಂತರ ಆನೇಕಲ್ನಲ್ಲಿರುವ ಸಿಂಡಿಕೇಟ್ ಬ್ಯಾಂಕ್ ಮುಂದೆ ಜಮಾಯಿಸಿರುವ ನೂರಾರು ಗ್ರಾಹಕರು ಪ್ರತಿಭಟಿಸಿದ್ದಾರೆ. ಗ್ರಾಹಕರಿಗೆ ಸರಿಯಾದ ಸಮಯಕ್ಕೆ ಸಾಲ ನೀಡದ ನೂತನ ಮಹಿಳಾ ಮ್ಯಾನೇಜರ್ ಧೋರಣೆ ವಿರುದ್ಧ ಪ್ರತಿಭಟನೆಗಿಳಿದ ಗ್ರಾಹಕರಿಗೆ ಮಾನವತಾವಾದ ಸಂಘಟನೆ ಸಾಥ್ ನೀಡಿದೆ. ಸಾಲ ಕೇಳಿದವರನ್ನು ತಿಂಗಳುಗಟ್ಟಲೆ ಅಲೆಸಿ ಕೊನೆಗೆ ಕೊಡಲಾಗುವುದಿಲ್ಲ ಎಂದೆನ್ನುತ್ತಾರೆ ಎಂದು ಮ್ಯಾನೇಜರ್ ವಿರುದ್ಧ ದೂರಿದ್ದಾರೆ. ಸಾಲ ಸಿಗದೆ ರೊಚ್ಚಿಗೆದ್ದ ಗ್ರಾಹಕರು ಬ್ಯಾಂಕ್ಗೆ ಮುತ್ತಿಗೆ ಹಾಕಿದ್ದಾರೆ.


ಸಂಬಂಧಿತ ಟ್ಯಾಗ್ಗಳು

customers Bank ಸಿಂಡಿಕೇಟ್ ಮ್ಯಾನೇಜರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ