ಕಾಡಾನೆಗಳ ದಾಳಿ: ಅಪಾರ ಬೆಳೆ ನಾಶ

wild elephants Destroyed enormous crop

21-02-2018

ರಾಮನಗರ: ಬಾಳೆ ಮತ್ತು ಮಾವಿನ ತೋಟಕ್ಕೆ ನುಗ್ಗಿದ ಕಾಡಾನೆಗಳು ಅಪಾರ ಪ್ರಮಾಣದ ಬೆಳೆ ನಾಶಗೊಳಿಸಿವೆ. ರಾಮನಗರ ತಾಲ್ಲೂಕಿನ ಕೈಲಾಂಚ ಹೋಬಳಿ ನಂಜಾಪುರ ಗ್ರಾಮದ ಯೋಗೇಶ್ ಎಂಬ ರೈತ ಬೆಳೆದಿದ್ದ ಬಾಳೆ ಬೆಳೆ, ಚಿಕ್ಕರಾಜು ಹಾಗೂ ಲಿಂಗರಾಜು ಎಂಬುವರಿಗೆ ಸೇರಿದ ಮಾವಿನ ತೋಟಕ್ಕೆ ಲಗ್ಗೆ ಇಟ್ಟ ಮೂರು ಕಾಡಾನೆಗಳು ಬೆಳೆ ನಾಶಗೊಳಿಸಿವೆ. ಇದರಿಂದ ರೈತರಿಬ್ಬರು ಕಂಗಾಲಾಗಿದ್ದಾರೆ.

ಈ ಪ್ರದೇಶದಲ್ಲಿ ಪದೇ ಪದೇ ಕಾಡಾನೆಗಳು ದಾಳಿ ಮಾಡುತ್ತಿದ್ದರೂ ಎಚ್ಚೆತ್ತುಕೊಳ್ಳದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ಕಾಡಾನೆಗಳ ಹಾವಳಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದ ಹಾಗಾಗಿದೆ ರೈತರ ಪರಿಸ್ಥಿತಿ.


ಸಂಬಂಧಿತ ಟ್ಯಾಗ್ಗಳು

Elephants wild animals ಕಾಡಾನೆ ಸಂಕಷ್ಟ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ