ರಾಜ್ಯ ಬಿಜೆಪಿ ವಿರುದ್ಧ ಹೆಚ್ಡಿಕೆ ಕಿಡಿ

kumara parva meeting in hubballi

21-02-2018

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರಿಗೆ ಭಾಷಣ ಬರೆದು ಕೊಡುವವರು ರಾಜ್ಯದ ಬಿಜೆಪಿ ಮುಖಂಡರು. ಎಲ್ಲವನ್ನೂ ಬರೆದು ಕೊಡುವ ಅವರು, ಮಹದಾಯಿ ವಿಚಾರದ ಬಗ್ಗೆ ಏಕೆ‌ ಬರೆಯುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಪ್ರಶ್ನಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಕುಮಾರ ಪರ್ವ ಬಹಿರಂಗ ‌ಸಭೆಯನ್ನುದ್ದೇಶಿಸಿ ಮಾತನಾಡಿ, ಮಹದಾಯಿ ವಿಚಾರವಾಗಿ ಈಗ ನಿತಿನ್ ಗಡ್ಕರಿ ಮಧ್ಯಸ್ಥಿಕೆ ವಹಿಸುವ ಮಾತು ಹೇಳಿದ್ದಾರೆ. ಈ ಹಿಂದೆ ಯಡಿಯೂರಪ್ಪ ಸಹ ಇದೇ ರೀತಿ ಭರವಸೆ ಕೊಟ್ಟು, ಮಾತು ತಪ್ಪಿದ್ದಾರೆ ಎಂದು ಕಿಡಿಕಾರಿದರು.

ಮಹದಾಯಿ ಸಮಸ್ಯೆ ಇತ್ಯರ್ಥಪಡಿಸಲು ಎರಡು ನಿಮಿಷ ಸಾಕು ಆದರೆ ಪ್ರಧಾನಿ ಮನಸ್ಸು ಮಾಡಿದರೆ ಮಾತ್ರ ಎಂದರು. ಈ ಸರ್ಕಾರಗಳು ರೈತರು ಸಾಲ ಮನ್ನಾ ಮಾಡುತ್ತಿಲ್ಲ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಆರೋಪಿಸಿದರು. ರಾಜ್ಯದಲ್ಲಿ ತೀವ್ರ ಬರಗಾಲದಿಂದ ರೈತರು ಕಂಗಾಲಾಗಿದ್ದಾರೆ. ದಿನ ನಿತ್ಯ ರೈತರ ಆತ್ಮಹತ್ಯೆಗಳು ನಡೆಯುತ್ತಲೇ ಇವೆ ಎಂದ ಅವರು, ಎಲ್ಲಾ ಶಕ್ತಿ ನಿಮ್ಮ ಹತ್ತಿರ ಇದೆ ಇನ್ನು ಮೂರು ತಿಂಗಳು ತಾಳಿಕೊಳ್ಳಿ ಎಂದು ರೈತರಿಗೆ ಹೇಳಿದ್ದಾರೆ.

 

 


ಸಂಬಂಧಿತ ಟ್ಯಾಗ್ಗಳು

H.D.kumaraswamy Narendra modi ಬರಗಾಲ ಸರ್ಕಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ