ಪೊಲೀಸ್ ಕಮಿಷನರ್ ಸುನಿಲ್ ಕುಮಾರ್ ಎತ್ತಂಗಡಿ…!

police commissioner T.Suneel Kumar may get transferred..!

21-02-2018

ಇತ್ತೀಚಿನ ಕೆಲವು ದಿನಗಳಲ್ಲಿ ಬೆಂಗಳೂರು ನಗರದ ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆ ವಿಚಾರದಲ್ಲಿ ಪೊಲೀಸರ ವಿರುದ್ಧ ಸಾಕಷ್ಟು ಆರೋಪಗಳು ಕೇಳಿ ಬಂದಿವೆ. ಚುನಾವಣೆ ಹತ್ತಿರವೇ ಇರುವ ಸಂದರ್ಭದಲ್ಲಿ, ಶಾಸಕ ಹ್ಯಾರಿಸ್ ಪುತ್ರನ ಪ್ರಕರಣವೂ ಸೇರಿದಂತೆ ಹಲವು ವಿಚಾರಗಳಲ್ಲಿ ಸರ್ಕಾರಕ್ಕೆ ಮುಜುಗರ ಉಂಟಾಗಿದೆ.

ಸೂಕ್ಷ್ಮ ಪ್ರಕರಣಗಳನ್ನು ಸರಿಯಾಗಿ ನಿಭಾಯಿಸುವಲ್ಲಿ ವಿಫಲರಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಸುನಿಲ್ ಕುಮಾರ್ ಅವರನ್ನು ಎತ್ತಂಗಡಿ ಮಾಡಲಾಗಿದೆ ಎಂಬ ಮಾಹಿತಿ ಸೂಪರ್ ಸುದ್ದಿಗೆ ತಿಳಿದು ಬಂದಿದೆ. ಇದೇ ವೇಳೆ, ಮೈಸೂರಿನ ಪೊಲೀಸ್ ವರಿಷ್ಠಾಧಿಕಾರಿ ರವಿ ಚನ್ನಣ್ಣವರ್ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್ಪಿ ಯಾಗಿ ನೇಮಿಸಲಾಗಿದೆ ಎಂದೂ ಕೂಡ ಮೂಲಗಳು ತಿಳಿಸಿವೆ.


ಸಂಬಂಧಿತ ಟ್ಯಾಗ್ಗಳು

T.Suneel Kumar Ravi channannavar ಕಮಿಷನರ್ ಚುನಾವಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Ravi Sir
  • Mahesh
  • Drivar