ದಾಂಧಲೆಗೆ ಬಂದ ಯುವಕರಿಗೆ ಥಳಿತ

villagers caught 2 boys and beaten

20-02-2018

ಬೆಂಗಳೂರು: ದೇವನಹಳ್ಳಿಯ ಬೆಟ್ಟೆನಹಳ್ಳಿಯಲ್ಲಿ ಬೈಕ್‍ಗೆ ಕರ್ಕಶ ಶಬ್ದ ಬರುವ ಸೈಲೆನ್ಸರ್ ಹಾಕಿಕೊಂಡಿದ್ದ ಯುವಕರನ್ನು ಗ್ರಾಮಸ್ಥರು ಪ್ರಶ್ನಿಸಿದ್ದಕ್ಕೆ ಅಕ್ರೋಶಗೊಂಡ ಯುವಕ ತನ್ನ ಸ್ನೇಹಿತರನ್ನು ಕರೆತಂದು ದಾಂಧಲೆ ನಡೆಸಲು ಹೋಗಿ ಗ್ರಾಮಸ್ಥರಿಂದ  ಥಳಿಸಿಕೊಂಡಿದ್ದಾರೆ.

ಯಲಹಂಕದ ಶೇಷಾದ್ರಿಪುರಂ ಕಾಲೇಜಿನಲ್ಲಿ ಓದುತ್ತಿದ್ದವರುವ ಹರೀಶ್ ಮತ್ತು ಹೇಮಂತ್ ಎಂಬ ಯುವಕರು ತಮ್ಮ ಬೈಕ್ ಗೆ ಹೆಚ್ಚು ಶಬ್ದ ಬರುವ ಸೈಲೆನ್ಸರ್ ಅಳವಡಿಸಿಕೊಂಡು ಬೆಟ್ಟೆನಹಳ್ಳಿಯಲ್ಲಿಸುತ್ತಾಡುವಾಗ ಗ್ರಾಮಸ್ಥರು ಬೈದು ಕಳುಹಿಸಿದ್ದರು. ಅಕ್ರೋಶಗೊಂಡ ಹರೀಶ್ ಹಾಗೂ ಹೇಮಂತ್, ತಮ್ಮ ಕಾಲೇಜಿನ 20 ಯುವಕರೊಂದಿಗೆ ಬೆಟ್ಟೇನಹಳ್ಳಿ ಗ್ರಾಮಕ್ಕೆ ತೆರಳಿ ವಿಕೆಟ್, ಬ್ಯಾಟ್, ಲಾಂಗ್ ತೆಗೆದುಕೊಂಡು ಗಲಾಟೆ ಮಾಡಲು ಮುಂದಾದಾಗ ಗ್ರಾಮಸ್ಥರು ಇಬ್ಬರು ಯುವಕರನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ. ಈ ಸಂಬಂಧ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹರೀಶ್ ಮತ್ತು ಹೇಮಂತ್ ನ ತಂದೆ ಹಾಗೂ ಅಜ್ಜನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

Devanahalli villagers ಹಿಗ್ಗಾಮುಗ್ಗ ಅಕ್ರೋಶ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ