ತಡರಾತ್ರಿವರೆಗೂ ನಲಪಾಡ್ ವಿಚಾರಣೆ...

Nalapad inquiry till midnight

20-02-2018

ಬೆಂಗಳೂರು: ಉದ್ಯಮಿ ಪುತ್ರ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದ ಮೇಲೆ ಪೊಲೀಸರ ಬಂಧನದಲ್ಲಿರುವ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್  ವಿಚಾರಣೆಯನ್ನು ಸಿಸಿಬಿ ಅಧಿಕಾರಿಗಳು ತೀವ್ರಗೊಳಿಸಿದ್ದಾರೆ. ವಿಚಾರಣೆಗಾಗಿ ಕೇವಲ ಎರಡು ದಿನಗಳನ್ನಷ್ಟೇ ನೀಡಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ನಿನ್ನೆ ತಡರಾತ್ರಿಯವರೆಗೂ ವಿಚಾರಣೆ ನಡೆಸಿದರು. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿರುವ ನಲಪಾಡ್ ಹ್ಯಾರಿಸ್ ಮತ್ತು ಅವರ ಐವರು ಸ್ನೇಹಿತರನ್ನೂ ಸಿಸಿಬಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ.

ವಿಚಾರಣೆ ವೇಳೆ ಘಟನೆ ನಡೆದಾಗ ಯಾರ್ಯಾರಿದ್ದರು, ಗಲಾಟೆ ನಡೆದಿದ್ದು ಯಾವ ಕಾರಣಕ್ಕೆ, ವಿದ್ವತ್ ಮೇಲೆ ಹಲ್ಲೆ ಮಾಡಿದ್ದು ಯಾಕೆ ಎಂಬ ಪ್ರಶ್ನೆಗಳಿಗೆ ನಲಪಾಡ್‍ನಿಂದ ತನಿಖಾಧಿಕಾರಿಗಳು ಉತ್ತರ ಪಡೆದಿದ್ದಾರೆ ಎನ್ನಲಾಗಿದೆ. ಇನ್ನು ಸಿಸಿಬಿ ಅಧಿಕಾರಿಗಳು ಘಟನೆ ನಡೆದ ಯುಬಿ ಸಿಟಿಯ ರೆಸ್ಟೋರೆಂಟ್‍ನಲ್ಲಿರುವ ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ನಾಳೆ ಮತ್ತೆ ಕೋರ್ಟ್‍ಗೆ ನಲಪಾಡ್ ನನ್ನು ಹಾಜರುಪಡಿಸಲಾಗುತ್ತದೆ.


ಸಂಬಂಧಿತ ಟ್ಯಾಗ್ಗಳು

Nalapad MLA Haris ಪರಿಶೀಲನೆ ಸಿಸಿಟಿವಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ