ಕಳ್ಳರ ಹಾವಳಿಗೆ ಬೆಚ್ಚಿಬಿದ್ದ ಜನ

Notorious thief escaped from police

20-02-2018

ಗದಗ: ಕಳ್ಳನೊಬ್ಬನು ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಿದ್ದಾನೆ. ಘಟನೆ ಗದಗ ಜಿಲ್ಲೆಯ ಬೆಟಗೇರಿಯಲ್ಲಿ ನಡೆದಿದೆ. ನಿನ್ನೆ ತಡ ರಾತ್ರಿ ಕಳ್ಳತನಕ್ಕೆಂದು ಇರಾನಿ ಕಾಲೋನಿಗೆ ಬಂದಿದ್ದ ಕಳ್ಳನನ್ನು ಸ್ಥಳೀಯರೇ ಹಿಡಿದು ಥಳಿಸಿದ್ದಾರೆ. ಈ ವೇಳೆ ತನ್ನ ಬಳಿ ಇದ್ದ ಮಾರಕಾಸ್ತ್ರಗಳಿಂದ ಬೆದರಿಸಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ಇದೇ ವೇಳೆಗೆ ಸ್ಥಳಕ್ಕೆ ಬಂದ ನೈಟ್ ಬೀಟ್ ಪೊಲೀಸ್ ಸಿಬ್ಬಂದಿ ಕಳ್ಳನನ್ನು ಹಿಡಿಯಲು ಮುಂದಾಗಿದ್ದು, ಕಳ್ಳ ಪೊದೆಗಳಲ್ಲಿ ನುಗ್ಗಿದ್ದಾನೆ. ಆದರೂ ಕಳ್ಳನನ್ನು ಹಿಡಿಯುವ ಪ್ರಯತ್ನ ಮುಂದುವರೆಸಿದ ಪೊಲೀಸರು, ಎರಡು ಜೆಸಿಬಿ ಮೂಲಕ ಸತತ ಮೂರು ಗಂಟೆಗಳ ಕಾಲ ಮುಳ್ಳಿನ ಗಿಡಗಳನ್ನು ಕಡಿದು, ಬೆಂಕಿ ಹಚ್ಚಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಕಳ್ಳ ಮಾತ್ರ ಸಿಗಲಿಲ್ಲ. ಸ್ಥಳಕ್ಕೆ ಡಿವೈಎಸ್ಪಿ ವಿಜಯಕುಮಾರ್ ಭೇಟಿ ನೀಡಿ ಪರಿಶೀಲನೆ ಮಾಡಿದರು. ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Police Thief ಪ್ಲಾನ್ ಡಿವೈಎಸ್ಪಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ