ವಿದ್ವತ್ ಗೆ ಶಸ್ತ್ರಚಿಕಿತ್ಸೆ ಅನಿವಾರ್ಯ..!

surgery is must for vidwath

19-02-2018

ಬೆಂಗಳೂರು: ಶಾಸಕ ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್, ಯುವಕ ವಿದ್ವತ್ ಮುಖಕ್ಕೆ ಗುದ್ದಿದರಿಂದ ಮೂಗಿನ ಮೂಳೆ ಮುರಿದಿದ್ದು ಕೆಲವೆಡೆ ಪುಡಿಯಾಗಿರುವುದರಿಂದ ಶಸ್ತ್ರಚಿಕಿತ್ಸೆ ಮಾಡುವುದು ಅನಿವಾರ್ಯವಾಗಿದೆ. ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ವತ್‍ಗೆ ಮುಖದ ಬಾವು ಕೊಂಚ ಕಡಿಮೆ ಆಗಿದೆ. ನಿನ್ನೆ ಇವರ ಮುಖದ ಭಾಗದ ಸ್ಕ್ಯಾನಿಂಗ್ ಮಾಡಿ ಚಿಕಿತ್ಸೆ ಮುಂದುವರೆಸಲಾಗಿದೆ.

ಮೂಗಿಗೆ ಗಂಭೀರ ಪೆಟ್ಟಾಗಿರುವುದರಿಂದ ಶಸ್ತ್ರಚಿಕಿತ್ಸೆ ಮಾಡಬೇಕಾದ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿದ್ದು, ಮುಖಕ್ಕೆ ಬಲವಾಗಿ ಪೆಟ್ಟಾದ ಹಿನ್ನೆಲೆಯಲ್ಲಿ ಸದ್ಯ ದ್ರವರೂಪದ ಆಹಾರವನ್ನು ಮಾತ್ರ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ಮುಖದ ಮೇಲೆ ಗಂಭೀರವಾದ ಗಾಯಗಳಾಗಿವೆ. ಇನ್ನೊಮ್ಮೆ ಸ್ಕ್ಯಾನಿಂಗ್ ಮಾಡಿ, ನಿನ್ನೆಯ ಹಾಗೂ ಇಂದಿನ ವರದಿ ಕೈಸೇರಿದ ಮೇಲೆ ಶಸ್ತ್ರಚಿಕಿತ್ಸೆ ಬಗ್ಗೆ ನಿರ್ಧರಿಸುತ್ತೇವೆ. ಮೊದಲ ಮಾಹಿತಿ ಪ್ರಕಾರ ಮೂಗಿನ ಮೂಳೆ ಮುರಿದಿರುವುದು ದೃಢಪಟ್ಟಿದೆ. ಅದರಿಂದ ಶಸ್ತ್ರಚಿಕಿತ್ಸೆ ಅನಿವಾರ್ಯವಾಗಬಹುದು ಎಂದು ಹೇಳಿದ್ದಾರೆ. ಕಣ್ಣು ಮತ್ತು ಕೆನ್ನೆಯ ಭಾಗದಲ್ಲಿ ಊದಿಕೊಂಡಿರುವುದು ಹಾಗೆಯೇ ಇದೆ. ಮುಖದ ಉಳಿದ ಭಾಗದ ಊತ ಕೊಂಚ ಕಡಿಮೆ ಆಗಿದೆ. ಕಣ್ಣು ಕೊಂಚ ಬಿಡಲು ಸಾಧ್ಯವಾಗುತ್ತಿದೆ ಎಂದು ವೈದ್ಯರು ಮಾಹಿತಿ ನೀಡಿದರು.


ಸಂಬಂಧಿತ ಟ್ಯಾಗ್ಗಳು

N.A.haris nalapad ಗಂಭೀರ ಸ್ಕ್ಯಾನಿಂಗ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ