ವಾಮಾಚಾರದೊಂದೊಗೆ ಬೆದರಿಕೆ ಪತ್ರ..!

19-02-2018
ಬಾಗಲಕೋಟೆ: ಮೊನ್ನೆಯಷ್ಟೇ ಜೆಡಿಎಸ್ ಅಭ್ಯರ್ಥಿಗಳನ್ನು ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಬಾಗಲಕೋಟೆಯ ಜಮಖಂಡಿ ಜೆಡಿಎಸ್ ಅಭ್ಯರ್ಥಿ ಕಚೇರಿ ಮುಂದೆ ವಾಮಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ಕಚೇರಿ ಬಾಗಿಲ ಮುಂದೆ ನಿಂಬೆ ಹಣ್ಣು, ಕುಂಕುಮ ಕಟ್ಟಿರುವ ದುಷ್ಕರ್ಮಿಗಳು, ಪತ್ರವೊಂದನ್ನು ಬರೆದಿಟ್ಟು ಹೆದರಿಸಿದ್ದಾರೆ.
ಪತ್ರದಲ್ಲಿ ನಿಮ್ಮ ರಾಜಕೀಯ ಭವಿಷ್ಯ ನಮ್ಮ ಕೈಯಲ್ಲಿದೆ, ದಯವಿಟ್ಟು ಅರ್ಥ ಮಾಡಿಕೊಳ್ಳಿ, ಇಲ್ಲದಿದ್ದರೆ ನಿಮ್ಮ ಹೆಸರು ಕೆಟ್ಟು ಹೋಗುತ್ತದೆ ಎಂದು ಉಲ್ಲೇಖಿಸಿದ್ದಾರೆ. ಜಮಖಂಡಿಯ ಜೆಡಿಎಸ್ ಅಭ್ಯರ್ಥಿಯಾಗಿರುವ ತೌಫಿಕ್ ಪಾರ್ಥನಳ್ಳಿ ತನ್ನ ಕಚೇರಿಯನ್ನು ಜೆಡಿಎಸ್ ಕಚೇರಿ ಎಂದು ಹೆಸರು ಮಾರ್ಪಡಿಸುತ್ತಿದ್ದು, ಜೆಡಿಎಸ್ ನಲ್ಲಿನ ಭಿನ್ನಮತದ ಗುಂಪು ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದೆ.
ಒಂದು ಕಮೆಂಟನ್ನು ಹಾಕಿ