'ಮೈಸೂರಲ್ಲಿ ಬಿಜೆಪಿಗೆ ಬುನಾದಿಯೇ ಇಲ್ಲ’-ಸಿಎಂ19-02-2018

ಮೈಸೂರು: ರೈತ ನಾಯಕ ‌ಕೆ.ಎಸ್.ಪುಟ್ಟಣ್ಣಯ್ಯ ಹಠಾತ್ ನಿಧನ‌, ನಿಜಕ್ಕೂ ಆಘಾತ ತಂದಿದೆ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ. ಮೊನ್ನೆಯಷ್ಟೇ ಬಜೆಟ್ ಮಂಡನೆ ವೇಳೆ ನನ್ನನ್ನು ಭೇಟಿಯಾಗಿ ಶುಭಕೋರಿ, ಚುನಾವಣೆಗೆ ತಯಾರಾಗುತ್ತಿದ್ದೇನೆ ಎಂದೂ ಕೂಡ ಹೇಳಿದ್ದರು. ನಾನು ರೈತ ಸಂಘದಲ್ಲಿದ್ದಾಗ ಅವರು ಆಗಷ್ಟೇ ರೈತ ಸಂಘಕ್ಕೆ ಎಂಟ್ರಿ ಪಡೆದಿದ್ದರು. ವಾಗ್ಮಿಯಾಗಿದ್ದ ಪುಟ್ಟಣ್ಣಯ್ಯ ಉತ್ತಮ ಕಬಡ್ಡಿ ಪಟುವಾಗಿದ್ದರು ಎಂದ ಸಿಎಂ, ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಕೊಡಲಿ ಎಂದರು.

ಇನ್ನು ಮೈಸೂರಿನಲ್ಲಿ ಬಿಜೆಪಿ ಸಮಾವೇಶ ಕುರಿತು, ಪ್ರತಿಕ್ರಿಯಿಸಿ, ಅದು ಅವರ ಪಕ್ಷದ ಕಾರ್ಯಕ್ರಮ. ಮೈಸೂರು ಭಾಗದಲ್ಲಿ ಬಿಜೆಪಿಗೆ ಬುನಾದಿಯೇ ಇಲ್ಲ. ಜಿಲ್ಲೆಯ ಯಾವ ಪ್ರಾಂತ್ಯದಲ್ಲಾದರೂ ಬಿಜೆಪಿ ಗೆದ್ದಿದೆಯಾ? ಹಾಗಾಗಿ ಸಮಾವೇಶ ತಾವೇ ಮಾಡಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.


ಸಂಬಂಧಿತ ಟ್ಯಾಗ್ಗಳು

siddaramaiah k.s.puttannaiah ಕಾರ್ಯಕ್ರಮ ವ್ಯಂಗ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ