ಪುಟ್ಟಣ್ಣಯ್ಯ ಅಂತಿಮ ದರ್ಶನ ಪಡೆದ ದರ್ಶನ್

Darshan Thoogudeep visited puttannaiah home

19-02-2018

ಮಂಡ್ಯ: ಕನ್ನಡ ಚಿತ್ರರಂಗ ನಾಯಕ ನಟ ದರ್ಶನ್ ಅವರು ಹೃದಯಾಘಾತದಿಂದ ಮೃತಪಟ್ಟಿರುವ ಶಾಸಕ ಪುಟ್ಟಣ್ಣಯ್ಯನವರ ಅಂತಿಮ ದರ್ಶನ ಪಡೆದರು. ಪುಟ್ಟಣ್ಣಯ್ಯ ನಿಧನದ ಸುದ್ದಿ ತಿಳಿದು ಪಾಂಡವಪುರದ ಕ್ಯಾತನಹಳ್ಳಿ ಗ್ರಾಮಕ್ಕೆ ಆಗಮಿಸಿದ ದರ್ಶನ್ ಅಂತಿಮ ದರ್ಶನ ಪಡೆದು ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.

ಇನ್ನು ಚಿಕ್ಕಮಗಳೂರು ಕ್ಷೇತ್ರದ ಶಾಸಕ ಸಿ.ಟಿ.ರವಿ ಅವರು ಅಗಲಿದ ಶಾಸಕ ಪುಟ್ಟಣ್ಣಯ್ಯ ನಿಧನಕ್ಕೆ ಕಂಬನಿ ಮಿಡಿದರು. ಅಂತಿಮ ದರ್ಶನದ ವೇಳೆ ಭಾವುಕರಾಗಿ ಕಂಬನಿ ಮಿಡಿಯುತ್ತಲೇ ಪುಟ್ಟಣ್ಣಯ್ಯ ನವರ ಅಂತಿಮ ದರ್ಶನ ಪಡೆದರು. ಜಿಲ್ಲೆಯ ಡಿಸಿ, ಎಸ್.ಪಿ ಪುಟ್ಟಣ್ಣಯ್ಯ ಅವರ ಮನೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.


ಸಂಬಂಧಿತ ಟ್ಯಾಗ್ಗಳು

challening darshan ಪಾಂಡವಪುರ ಕಂಬನಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ