ಕಟ್ಟಡ ಕುಸಿತ: ಇಬ್ಬರ ಬಂಧನ

Building collapse: 2 arrested

17-02-2018

ಬೆಂಗಳೂರು: ಸರ್ಜಾಪುರ ರಸ್ತೆಯ ಕಸವನಹಳ್ಳಿಯ ಐದು ಅಂತಸ್ತಿನ ಕಟ್ಟಡ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್ ಮುನಿರೆಡ್ಡಿ ಸೇರಿ ಇಬ್ಬರನ್ನು ಬೆಳ್ಳಂದೂರು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಬಿಬಿಎಂಪಿ ಎಂಜಿನಿಯರ್ ಮುನಿರೆಡ್ಡಿ (48), ಕುಸಿದ ಕಟ್ಟಡದ ಜಿಪಿಎ ಪಡೆದಿದ್ದ ಎಚ್‍ಎಸ್‍ಆರ್ ಲೇಔಟ್‍ನ ತನ್ವೀರ್ ಖಾನ್ (33)ನನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಕಟ್ಟಡದ ಮಾಲೀಕ ಕಣ್ಣೂರಿನ ಮೊಹ್ಮದ್ ಕಟ್ಟಡ ನಿರ್ಮಾಣದ ಉಸ್ತುವಾರಿ ವಹಿಸಿದ್ದ ಮೇಸ್ತ್ರಿ ಹಾಗೂ ಕಟ್ಟಡ ವಿನ್ಯಾಸಕಾರ,  ಎಂಜಿನಿಯರ್ ಗಾಗಿ ಬಂಧನಕ್ಕೆ ಶೋಧ ನಡೆಸಲಾಗಿದೆ ಎಂದು ವೈಟ್‍ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.

ನ್ಯಾಯಾಲಯದಿಂದ ವಿವಾದ ಬಗೆಹರಿಸಿಕೊಂಡಿದ್ದ ಮೊಹ್ಮದ್ ಅವರು, ಅರ್ಧ ಕಟ್ಟಿದ ಕಟ್ಟಡವನ್ನು ಮಗಳು ಸಮೀರ್ ಹಾಗೂ ಅಳಿಯ ರಫೀಕ್‍ಗೆ ಉಡುಗೊರೆಯಾಗಿ ನೀಡಿದ್ದು, ಮತ್ತೆ ನಿರ್ಮಾಣದ ಕೆಲಸ ಆರಂಭಗೊಂಡಿತ್ತು. ಈ ಕೃತ್ಯದಲ್ಲಿ ಸಮೀರ್ ಹಾಗೂ ರಫೀಕ್ ಪಾತ್ರ ಕಂಡು ಬಂದಿಲ್ಲ ಎಂದು ತಿಳಿಸಿದ್ದಾರೆ. ಈ ನಡುವೆ ಕುಸಿದ ಕಟ್ಟಡದ ಅವಶೇಷಗಳ ತೆರವು ಕಾರ್ಯ ಬಹುತೇಕ ಪೂರ್ಣಗೊಳಿಸಲಾಗಿದ್ದು, ಇಲ್ಲಿಯವರೆಗೆ ಯಾವುದೇ ವ್ಯಕ್ತಿಯಾಗಲಿ, ಮೃತದೇಹವಾಗಲಿ ಪತ್ತೆಯಾಗಿಲ್ಲ. ದುರಂತದಲ್ಲಿ ಇಲ್ಲಿಯವರೆಗೆ ನಾಲ್ವರು ಮೃತಪಟ್ಟಿದ್ದು, ಗಾಯಗೊಂಡಿರುವ ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

building collapse engineer ನ್ಯಾಯಾಲಯ ವೈಟ್‍ಫೀಲ್ಡ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ