'ಬಹಮನಿ ಉತ್ಸವ ಇಲ್ಲ'17-02-2018

ಬೆಂಗಳೂರು: ತೀವ್ರ ವಿವಾದದ ಹಿನ್ನೆಲೆಯಲ್ಲಿ ಬಹಮನಿ ಉತ್ಸವ ಆಚರಣೆ ನಿರ್ಧಾರದಿಂದ ರಾಜ್ಯ ಸರ್ಕಾರ ಹಿಂದೆ ಸರಿದಿದೆ. ಈ ಮೂಲಕ ಪ್ರತಿಪಕ್ಷ ಬಿಜೆಪಿಯ ಕೈಯ್ಯಲ್ಲಿ ನೀಡಿದ್ದ ಶಸ್ತ್ರವನ್ನು ಏಕಾಏಕಿ ವಾಪಸ್ಸು ಪಡೆದು ಕೊಂಡಿದೆ. ಅಂದ ಹಾಗೆ ಚುನಾವಣಾ ಮುನ್ನ ಬಹಮನಿ ಸುಲ್ತಾನರ ಉತ್ಸವ ಆಚರಣೆಗೆ ಸ್ವತಃ ಕಾಂಗ್ರೆಸ್ ಪಕ್ಷದ ಕೆಲ ಮುಖಂಡರಿಂದಲೇ ಅಸಮಾಧಾನ ವ್ಯಕ್ತವಾಗಿತ್ತು. ಬಿಜೆಪಿ ಬೀದಿಗಿಳಿದು ಹೋರಾಟ ನಡೆಸುವ ಎಚ್ಚರಿಕೆ ನೀಡಿತ್ತು, ಗುಪ್ತಚರ ವರದಿಯೂ ಉತ್ಸವದ ವಿರುದ್ಧವಾಗಿತ್ತು.

ಈ ಎಲ್ಲಾ ಅಂಶಗಳ ಆಧಾರದ ಮೇಲೆ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿಂದಾಗಿ ಬಹಮನಿ ಉತ್ಸವ ಆಚರಣೆಯಿಂದ ಸರ್ಕಾರ ಹಿಂದೆ ಸರಿದಿದೆ ಎಂದು ತಿಳಿದುಬಂದಿದೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ಸರ್ಕಾರದ ವತಿಯಿಂದ ಬಹಮನಿ ಸುಲ್ತಾನರ ಉತ್ಸವ ಮಾಡುತ್ತಿಲ್ಲ. ರಾಷ್ಟ್ರಕೂಟರ ಉತ್ಸವ ಮಾಡಲಾಗುತ್ತಿದೆ ಎಂದರು. ಬಹಮನಿ ಸುಲ್ತಾನ ಕಮಿಟಿ ಈ ಬಗ್ಗೆ ವಿಷಯ ಪ್ರಸ್ತಾಪ ಮಾಡಿತ್ತು ಅಷ್ಟೇ. ಸರ್ಕಾರ ಬಹಮನಿ ಸುಲ್ತಾನರ ಉತ್ಸವ ಮಾಡುತ್ತಿಲ್ಲ, ಉತ್ಸವ ಆಚರಣೆ ಸಮಿತಿಯವರು ಬೇಕಾದರೆ ಮಾಡಿಕೊಳ್ಳಬಹುದು ಎಂದು ಸ್ಪಷ್ಟಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

bahamani Government ಆಚರಣೆ ಪ್ರತಿಪಕ್ಷ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ