ರಾಜ್ಯದಲ್ಲಿ ಪಡಿತರ ಚೀಟಿ ಕುರಿತಂತೆ ಗದಗನಲ್ಲಿ ಯು.ಟಿ.ಖಾದರ್ ಪತ್ರಿಕಾಗೋಷ್ಠಿ

Kannada News

29-04-2017 233

ಗದಗನಲ್ಲಿ ರಾಜ್ಯ ಆಹಾರ ಇಲಾಖೆಯ ಸಚಿವರಾದ ಯು.ಟಿ.ಖಾದರ್ ಅವರ್ ಪತ್ರಿಕಾಗೋಷ್ಠಿ. ರಾಜ್ಯದ ಗ್ರಾಮೀಣಾಭಿವೃದ್ಧಿ, ಪಂಚಾಯತರಾಜ್ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ.ಪಾಟೀಲ, ಜಿ.ಪಂ.ಅಧ್ಯಕ್ಷ ವಾಸಣ್ಣಕುರಡಗಿ, ಉಪಾಧ್ಯಕ್ಷೆ ಶ್ರೀಮತಿ ರೂಪಾ ಅಂಗಡಿ, ಮಂಗಳೂರು ತಾ.ಪಂ.ಅಧ್ಯಕ್ಷ ಮನೋಹರ ಉಪಸ್ಥಿತರಿದ್ದರು.  ಆಹಾರ ಸಚಿವ ಖಾದರ ಅವರು ಮಾತನಾಡಿ, ರಾಜ್ಯದಲ್ಲಿ ಪಡಿತರ ಚೀಟಿಗಳ ಕುರಿತಂತೆ ಶಾಶ್ವತ ಪರಿಹಾರಕ್ಕೆ ತಮ್ಮ ಇಲಾಖೆ ಮುಂದಾಗಿದೆ. ಸುಧಾರಣೆ ಇದ್ದಲ್ಲಿ ಪ್ರಾರಂಭಿಕ ಸಮಸ್ಯೆಗಳು ಇರೋದು ಸಹಜವಾಗಿದೆ. ಪಾಸ್ಪೋಟ್೯ಗಿಂತ ತೀವ್ರವಾಗಿ ಪಡಿತರ ಚೀಟಿ ದೊರೆಯುವಂತೆ ಪ್ರಯತ್ನಿಸಲಾಗುತ್ತಿದ್ದು ಆಧಾರ ಸಂಖ್ಯೆ ಒಂದರಿಂದಲೇ ಪಡಿತರ ಚೀಟಿ ನೀಡುವ ಕ್ರಮ ಜಾರಿಗೊಳಿಸಲಾಗುತ್ತಿದೆ ಎಂದರು. ರಾಜ್ಯವನ್ನು ಹೊಗೆಮುಕ್ತ, ಸೀಮೆ ಎಣ್ಣೆ ಮುಕ್ತ ರಾಜ್ಯವಾಗಿಸಲು ಕೇಂದ್ರ ಸಕಾ೯ರದ ಉಜ್ವಲ ಯೋಜನೆಯ ಸೌಲಭ್ಯ ದೊರಕದ ಆದರೆ ಅಹ೯ ಕುಟುಂಬಗಳಿಗೆ ಉಚಿತ ಎಲ್.ಪಿ.ಜಿ.ಸಂಪಕ೯ ಹಾಗೂ ಸ್ಟೌಗಳನ್ನು ಒದಗಿಸುವ ಅನಿಲಭಾಗ್ಯ ಮತ್ತು ಬೆಳಕಿಗಾಗಿ ಸೀಮೆ ಎಣ್ಣೆ ಬಿಟ್ಟುಕೊಡುವವರಿಗೆ ಎರಡು ಉಚಿತ ರಿಚಾಜೆ೯ಬಲ್ ಎಲ್.ಇ.ಡಿ.ಬಲ್ಬ ನೀಡುವ ಪುನಬೆ೯ಳಕು ಯೋಜನೆ. ವೃದ್ದಾಶ್ರಮ, ನಾರೀಕೇತನ, ಅನಾಥಾಶ್ರಮಗಳಲ್ಲಿ ದಾಸೋಹ ಮುಂತಾದ ಹೊಸ ಯೋಜನೆಗಳಿಗೆ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು ಇಷ್ಟರಲ್ಲೆ ಚಾಲನೆ ನೀಡಲಿದ್ದಾರೆ.ಬೆಂಗಳೂರಿನ ವಿದ್ಯಾಥಿ೯ಗಳು, ನೌಕರರಿಗೆ, ನಿತ್ಯವೂ ಕೆಲಸಕ್ಕಾಗಿ ಬೆಂಗಳೂರಿಗೆ ಸಂಚರಿಸುವ ಕಾಮಿ೯ಕರ ಅನುಕೂಲಕ್ಕಾಗಿ 198 ವಾಡ೯ಗಳಲ್ಲಿ ಇಂದಿರಾ ಕ್ಯಾಂಟೀನ ಆಗಸ್ಟ 15 ರ ಒಳಗಾಗಿ ಆರಂಭಿಸಲು ಕ್ರಮ ಜರುಗಿಸಲಾಗುತ್ತಿದೆ ಎಂದ ಸಚಿವ ಖಾದರ್ ಮಾನ್ಯ ಮುಖ್ಯ ಮಂತ್ರಿಗಳ ಅನ್ನಭಾಗ್ಯ ಯೋಜನೆಯಿಂದಾಗಿ ಇಂದು ತೀವ್ರ ಬರ ಸಂಕಷ್ಟದಿಂದ ಬಡವರು ಕೆಲಸವಿಲ್ಲದಿದ್ದರೂ ಕನಿಷ್ಟ ಊಟದ ಗಂಜಿಯನ್ನು ಪಡೆಯಲು ಸಾಧ್ಯವಾಗಿದೆ ಎಂದರು.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ