ಮಹದಾಯಿ ಹೋರಾಟಕ್ಕೆ ವೈದ್ಯರ ಬೆಂಬಲ

Doctor

17-02-2018

ಬೆಂಗಳೂರು: ಮಹದಾಯಿ ನದಿ ನೀರಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಖಾಸಗಿ ವೈದ್ಯರು ಕೈಜೋಡಿಸಿದ್ದಾರೆ. ’ಕುಡಿಯಲು ನೀರು ಕೊಡಿ’ಎಂಬ ಕೂಗಿನೊಂದಿಗೆ ಆಂದೋಲನಕ್ಕೆ ಮುಂದಾದ ವೈದ್ಯರು, ‘ನಿಮ್ಮ ಜೊತೆ ನಾವಿದ್ದೇವೆ’ ಎಂಬ ಘೋಷಣೆಯಡಿ ಪಾದಯಾತ್ರೆ ಮಾಡಲಿದ್ದಾರೆ. ಭಾರತೀಯ ವೈದ್ಯಕೀಯ ಸಂಘದ ಅಡಿಯಲ್ಲಿ ಫೆ.18ರಿಂದ ಬೆಂಗಳೂರಿನಿಂದ ನರಗುಂದದವರೆಗೆ 485 ಕಿಲೋ ಮೀಟರ್ ಪಾದಯಾತ್ರೆ ಮಾಡಲು ವೈದ್ಯರು ನಿರ್ಧರಿಸಿದ್ದಾರೆ.

ಕುಡಿಯುವ ನೀರಿನ ವಿಚಾರದಲ್ಲಿ ಯಾವ ಸರ್ಕಾರವೂ ಉದಾಸೀನ ಮಾಡುವುದು ಖಂಡನೀಯ, ದೇಶದ ಹಿತದೃಷ್ಟಿಯಿಂದ ನೀರಿನ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದು ವೈದ್ಯರು ಹೇಳಿದ್ದಾರೆ. ನೀರಿನ ವಿಚಾರವಾಗಿ, ಜನರಲ್ಲಿ ಮತ್ತು ರಾಜಕಾರಣಿಗಳಲ್ಲಿ ಅರಿವು ಮೂಡಿಸಲು ಈ ಪಾದ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘ ಹೇಳಿದೆ.


ಸಂಬಂಧಿತ ಟ್ಯಾಗ್ಗಳು

Mahadayi doctors ಹಿತದೃಷ್ಟಿ ರಾಜಕಾರಣಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ