ಹಿಟ್ ಅಂಡ್ ರನ್; ಇಬ್ಬರ ಸಾವು

Hit and Run accident 2 died

17-02-2018

ವಿಜಯಪುರ: ಮುದ್ದೇಬಿಹಾಳದ ಕೊಣ್ಣೂರ ಬಳಿ ನಡೆದ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಮದಡ್ಡಿ ಗ್ರಾಮದ ನಿವಾಸಿಗಳಾದ ರಾಮನಗೌಡ ಮಾಲಗತ್ತಿ( 28), ಪ್ರವೀಣ್ ಪತ್ತಾರ(25) ಮೃತ ದುರ್ದೈವಿಗಳು. ಕೊಣ್ಣೂರಿನಿಂದ ತಮದಡ್ಡಿಗೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ವಾಹನವೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆದರೆ, ಡಿಕ್ಕಿಹೊಡೆದು ಪರಾರಿಯಾದ ವಾಹನ ಯಾವುದೆಂದು ತಿಳಿದು ಬಂದಿಲ್ಲ. ತಾಳಿಕೋಟಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Accident Hit and Run ಮುದ್ದೇಬಿಹಾಳ ದುರ್ದೈವಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ