'ಬಜೆಟ್ ನಿರಾಶಾದಾಯಕ'-ಸಿ.ಟಿ.ರವಿ16-02-2018

ಬೆಂಗಳೂರು: 13ನೇ ಬಾರಿ ಬಜೆಟ್ ಓದಿದ್ದೇ ಸಿಎಂ ಸಾಧನೆ, ಈ ಬಾರಿಯ ಬಜೆಟ್ ನಿರಾಶಾದಾಯಕ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ. ಈ ಬಾರಿ ಚುನಾವಣೆ ಇರುವುದರಿಂದ ಹೆಬ್ಬಾವು ತೆಗಿತಾರೆ ಅಂತ ಭಾವಿಸಿದ್ವಿ, ಅಥವ ಕೆರೆ ಹಾವನ್ನಾದರೂ ತೆಗಿತಾರೆ ಅಂತ ತಿಳಿದಿದ್ವಿ ಕೆರೆ ಹಾವೂ ಇಲ್ಲ, ಹೆಬ್ಬಾವೂ ಇಲ್ಲ ಎಂದು ವ್ಯಂಗ್ಯವಾಡಿದರು. ಸಿಎಂ ಬಜೆಟ್ ಮಂಡಿಸುವಾಗ ಆಡಳಿತ ಪಕ್ಷದ ಶಾಸಕರೇ ಆಕಳಿಸುತ್ತಿದ್ದರು. ಚಪ್ಪಾಳೆಯ ಕೊರತೆ ಇತ್ತು. ಕೇಂದ್ರದಿಂದ ಅನುದಾನ ಕಡಿತ ಆಗಿದೆ ಎಂದು ಸಿಎಂ ಆರೋಪ ಮಾಡುತ್ತಾರೆ, ಆದರೆ ಕೇಂದ್ರ ಹೆಚ್ಚಿನ ಅನುದಾನ ನೀಡಿರುವ ಬಗ್ಗೆ ಬಜೆಟ್ ಅಂಕಿ ಅಂಶಗಳೇ ಹೇಳುತ್ತವೆ ಎಂದಿದ್ದು, ಸರ್ಕಾರಿ ನೌಕರರಿಗೆ ಮೊಣಕೈಗೂ ತುಪ್ಪ ಇಲ್ಲ, ಮೂಗಿಗೂ ಇಲ್ಲ ಎಂದರು.


ಸಂಬಂಧಿತ ಟ್ಯಾಗ್ಗಳು

C.T Ravi Budget ಚಪ್ಪಾಳೆ ಸರ್ಕಾರಿ ನೌಕರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ