ರಾಜ್ಯ ಬಜೆಟ್ ಬಗ್ಗೆ ಈಶ್ವರಪ್ಪ ವ್ಯಂಗ್ಯ16-02-2018

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಕೊನೆ ಮುಖ್ಯಮಂತ್ರಿಯ ಕೊನೆ ಬಜೆಟ್ ಇದು ಎಂದು ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ. 2 ತಿಂಗಳಿಗೆ ಒಂದು ಬಜೆಟ್ ಅಂದರೆ ಅರ್ಥವಿಲ್ಲ, ಬಜೆಟ್ ಮಂಡನೆ ಮಾಡುವ ನೈತಿಕ ಹಕ್ಕು ಮುಖ್ಯಮಂತ್ರಿ ಸಿದ್ದರಾಮಯ್ಯಗಿಲ್ಲ ಎಂದರು.

ಬೆಂಗಳೂರು ಗ್ರಾಮಾಂತರ ನೆಲಮಂಗಲ ಸಮೀಪದ ಪಾಲನಹಳ್ಳಿಯಲ್ಲಿ ಮಾತನಾಡಿದ ಈಶ್ವರಪ್ಪ, ಅವರ ಸಮಾಧಾನಕ್ಕಾಗಿ ಈ ಒಂದು ಬಜಟ್ ಮಂಡನೆ ಮಾಡಿದ್ದಾರೆ, ಬಜೆಟ್ ನಲ್ಲಿ ಹಿಂದುಳಿದವರ್ಗ ಹಾಗೂ ದಲಿತರಿಗೆ ಮತ್ತೆ ಅನ್ಯಾಯ ಮಾಡಿದ್ದಾರೆ. ಕಾಟಾಚಾರಕ್ಕೆ ಬಜೆಟ್ ಮಂಡನೆ ಮಾಡಿದ್ದಾರೆ ಎಂದು ದೂರಿದರು.

ಈ ಬಜೆಟ್ ಇಂದ ಜನರಿಗೆ ಉಪಯೋಗವಿಲ್ಲ, ಚುನಾವಣೆ ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತೆ ಆಗ ಒಳ್ಳೆ ಬಜೆಟ್ ಮಂಡನೆ ಮಾಡಲಿದ್ದೇವೆ ಎಂದು ರಾಜ್ಯದಲ್ಲಿ ಬಿಜೆಪಿ ಅದಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ, ಕಾವೇರಿ ತೀರ್ಪಿನ ವಿಚಾರವಾಗಿ ಮಾತನಾಡಿ, ತೀರ್ಪು ಕರ್ನಾಟಕ ಜನತೆಗೆ ಸಮಾಧಾನ ತಂದಿದೆ, ಅನೇಕ ವರ್ಷಗಳ ಹೋರಾಟಕ್ಕೆ ಯಶಸ್ಸು ಸಿಕ್ಕಿದೆ ಎಂದರು.

 

 


ಸಂಬಂಧಿತ ಟ್ಯಾಗ್ಗಳು

K.S.Eshwarappa budget ಸಮಾಧಾನ ಹೋರಾಟ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ