ರಾಜ್ಯ ಸರ್ಕಾರದ ವತಿಯಿಂದ ಬಸವೇಶ್ವರ ಜಯಂತಿ ಆಚರಣೆ

Kannada News

29-04-2017

ಬೆಂಗಳೂರಿನ ಬಸವೇಶ್ವರ ವೃತ್ತದಲ್ಲಿ ಸಚಿವ ಈಶ್ವರ್ ಖಂಡ್ರೆ ಅವರಿಂದ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಕಾರ್ಯಕ್ರಮ ನಡೆಯಿತು. ಸಚಿವ ಕೆ.ಜೆ ಜಾರ್ಜ್, ಮಾಜಿ ಸಚಿವ ಶ್ಯಾಮನೂರು ಶಿವಶಂಕರಪ್ಪ,  ಶರಣರಿಂದ ಬಸವೇಶ್ವರ ಪ್ರತಿಮೆಗೆ ಪುಷ್ಮನಮನ ಸಲ್ಲಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸ್ಥಬ್ಧ ಚಿತ್ರಗಳ ಮೆರವಣಿಗೆ ನಡೆಯಿತು.

ಇದೇ ಸಂದರ್ಭದಲ್ಲಿ ಮಾತನಾಡಿದ ಕೆ.ಜೆ.ಜಾರ್ಜ್ ಬಸವಣ್ಣವರ ವಚನ ೧೨ ನೇ ಶತಮಾನದಲ್ಲಿ ಪ್ರಸಿದ್ಧವಾಗಿದೆ. ಮೇಲು - ಕೀಳು ಬಾವನೆ ಇಲ್ಲದಂತೆ ಮಾಡಿದವರು ಬಸವಣ್ಣ. ಅವರು ಹಾಕಿ ಕೊಟ್ಟ ಹಾದಿಯಲ್ಲಿ ನಾವೆಲ್ಲರು ಹೋಗಬೇಕು. ಬಸವಣ್ಣ ತತ್ವ ಸರ್ವಕಾಲಿಕ ಚಾಲ್ತಿಯಲ್ಲಿರುತ್ತದೆ.

ಬಿಜೆಪಿ  ಆತಂರಿಕ ಕಿತ್ತಾಟ ವಿಚಾರ. 
ಯಾವುದೇ ರಾಜಕೀಯ ಪಕ್ಷದ ಆಂತರಿಕ ವಿಷಯದ ಬಗ್ಗೆ ಮಾತನಾಡುವುದಕ್ಕೆ ಬಯಸುವುದಿಲ್ಲ. ರಾಷ್ಟ್ರ ಮಟ್ಟದ ಪಕ್ಷ ಹೇಗಿರಬೇಕು ಎಂದು ನಾಯಕರಿಗೆ ತಿಳಿದಿರಬೇಕು. ಸಾಮಾಜಿಕ, ಜನಹಿತದ ಕೆಲಸ ಮಾಡೋದಕ್ಕೆ ಬಂದಿರುವುದು ಎಂದು ತಿಳಿದುಕೊಳ್ಳಬೇಕು. ಬಹಿರಂಗ ಕಚ್ಚಾಟ ಸರಿಯಲ್ಲ ಎಂದು ಹೇಳಿಕೆ ನೀಡಿದರು.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ