'ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ'16-02-2018

ಬಾಗಲಕೋಟೆ: ರಾಜ್ಯದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ, ಭ್ರಷ್ಟಾಚಾರಿಗಳಿಗೆ ಶಿಕ್ಷೆಯಾಗಬೇಕು ಎಂದು, ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಅವರು ಆಗ್ರಹಿಸಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಗಣಿ ಹಗರಣದ ಕುರಿತು ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಗಣಿ ಅಕ್ರಮದ ಬಗ್ಗೆ ಮೇಲ್ಮನವಿ ಸಲ್ಲಿಸುತ್ತಿಲ್ಲ ಎಂದು ದೂರಿದರು.

ಆನಂದ ಸಿಂಗ್, ಗಾಲಿ ಜನಾರ್ದನ ರೆಡ್ಡಿ, ನಾಗೇಂದ್ರ ಬಾಬು ಎಲ್ಲರ ಪಾತ್ರ ಬೇಲೆಕೇರಿ ಗಣಿ ಹಗರಣದಲ್ಲಿದೆ. ಗಣಿ ಹಗರಣದಲ್ಲಿದ್ದ ಆನಂದ್ ಸಿಂಗ್ ನನ್ನು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ, ಎಲ್ಲ ಪಕ್ಷಗಳು ಒಂದೇ ಕುಟುಂಬದಂತೆ, ಎಲ್ಲರೂ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ಹರಿಹಾಯ್ದರು.

ನ್ಯಾಯಾಂಗ ಹಾಗೂ ಪ್ರಜಾಪ್ರಭುತ್ವ ಸದ್ಯ ಗಂಡಾಂತರದಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಭ್ರಷ್ಟಾಚಾರಕ್ಕೆ ಮುಕ್ತಿ ಹಾಡಲು ಜನಸಂಘ ಪರಿಷತ್ ಪಕ್ಷ ಸ್ಥಾಪಿಸಿದ್ದೇವೆ, ಇದೇ ತಿಂಗಳ 18ರಂದು ಕೂಡಲಸಂಗಮದಲ್ಲಿ ಜನಸಂಘ ಪರಿಷತ್ ಪಕ್ಷದ ಬೃಹತ್ ಸಮಾವೇಶ ನಡೆಯಲಿದೆ ಎಂದು ತಿಳಿಸಿ, ಸದ್ಯಕ್ಕೆ ಯಾವುದೇ ಕ್ಷೇತ್ರದಿಂದ ನಾನು ಸ್ಪರ್ಧಿಸುವ ವಿಚಾರವಿಲ್ಲ, ಜನಸಂಘ ಪಕ್ಷ ಮತ್ತು ಜನಾಂದೋಲನ ಮೈತ್ರಿಗಳಿಂದ 20ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದರು.

 


ಸಂಬಂಧಿತ ಟ್ಯಾಗ್ಗಳು

S.R.Hiremath Corruption ಜನಸಂಘ ಪರಿಷತ್ ನ್ಯಾಯಾಂಗ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ