‘ಇದು ಕೇವಲ ಗಿಮಿಕ್ ಬಜೆಟ್’-ಶೋಭಾ16-02-2018

ದಾವಣಗೆರೆ: ಕಾವೇರಿ ನದಿ ನೀರು ವಿಚಾರವಾಗಿ ಸುಪ್ರೀಂ ತೀರ್ಪು ಇಡೀ ಕರ್ನಾಟಕಕ್ಕೆ ಸಂತಸ ತಂದಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿ ಅವರು, ನ್ಯಾಯಧೀಶರು ಕರ್ನಾಟಕದ ನೋವನ್ನು ಆಲಿಸಿದ್ದಾರೆ, ರಾಜ್ಯಕ್ಕೆ ಇನ್ನೂ ಹೆಚ್ಚುವರಿಯಾಗಿ 20 ಟಿ.ಎಂ.ಸಿ ನೀರು ಅನಿವಾರ್ಯವಿದೆ ಎಂದು ಅಭಿಪ್ರಾಯ ಪಟ್ಟರು. ರಾಜ್ಯ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಕರಂದ್ಲಾಜೆ ಇದು ಕೇವಲ ಗಿಮಿಕ್ ಬಜೆಟ್, ಸಿಎಂ ಸಿದ್ದರಾಮಯ್ಯ ಜನರ ಮೂಗಿಗೆ ತುಪ್ಪ ಸವರುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.


ಸಂಬಂಧಿತ ಟ್ಯಾಗ್ಗಳು

Shobha Karandlaje budget ಅಭಿಪ್ರಾಯ ಗಿಮಿಕ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ