ಬೇಸರ ತಗ್ಗಿಸಿದ ಸುಪ್ರೀಂ ತೀರ್ಪು

Supreme court verdict on Cauvery issue

16-02-2018

ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕದ ಬೇಸರ ಒಂದಿಷ್ಟು ತಗ್ಗುವಂಥ ತೀರ್ಪು ಸುಪ್ರೀಂಕೋರ್ಟಿನಿಂದ ಬಂದಿದೆ. ಸುಧೀರ್ಘ ವಿಚಾರಣೆ ನಂತರ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ಕರ್ನಾಟಕದ ಪಾಲಿನ ನೀರು ಹಂಚಿಕೆ ಹೆಚ್ಚಿಸಿರುವುದರ ಜೊತೆಗೆ ಕಾವೇರಿ ಕೊಳ್ಳದ ಅಚ್ಚುಕಟ್ಟು ಪ್ರದೇಶ ವಿಸ್ತರಣೆಗೂ ಗ್ರೀನ್ ಸಿಗ್ನಲ್ ನೀಡಿದೆ. ತಮಿಳುನಾಡಿಗೆ ಪ್ರತಿ ವರ್ಷ 177 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಸೂಚಿಸಿದೆ. ಈ ಹಿಂದೆ ಕಾವೇರಿ ನ್ಯಾಯಾಧಿಕರಣ, ಪ್ರತಿ ವರ್ಷ 192 ಟಿಎಂಸಿ ನೀರು ಬಿಡಬೇಕೆಂದು ಆದೇಶಿಸಿತ್ತು. ಸರ್ವಾನುಮತದ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್ 1924ರ ಒಪ್ಪಂದ ಅಸಾಂವಿಧಾನಿಕ ಅಲ್ಲ ಎಂದು ಹೇಳಿದೆ.  ಬೆಂಗಳೂರಿಗೆ 4.75 ಟಿಎಂಸಿ ನೀರು ನಿಗದಿ ಪಡಿಸುವಂತೆಯೂ ಕೋರ್ಟ್ ಹೇಳಿದೆ.

ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡಿಗೆ ಲಭ್ಯವಾಗುವ 20 ಟಿಎಂಸಿ ಅಂತರ್ಜಲವನ್ನೂ ಪರಿಗಣಿಸಬೇಕು ಎಂದು ಕೋರ್ಟ್ ಹೇಳಿದೆ. ಈ ಹಿಂದೆ ನಿಗದಿಪಡಿಸಿದ್ದಂತೆ ಕೇರಳದ ಪಾಲು 30 ಟಿಎಂಸಿ ಮತ್ತು ಪುದುಚೇರಿಗೆ 7 ಟಿಎಂಸಿ ನೀರು ಸಿಗಲಿದೆ. ಎರಡೂ ರಾಜ್ಯಗಳು ಸಮಾನ ಹಂಚಿಕೆ ತತ್ವ ಪಾಲಿಸಬೇಕು ಯಾವುದೇ ಒಂದು ರಾಜ್ಯ ಸಂಪೂರ್ಣ ಹಕ್ಕು ಸಾಧಿಸುವಂತಿಲ್ಲ, ನದಿಗಳು ರಾಷ್ಟ್ರೀಯ ಸಂಪತ್ತು ಎಂದು ಕೋರ್ಟ್ ಹೇಳಿದೆ. ಕಾವೇರಿ ನ್ಯಾಯಾಧೀಕರಣದ ಅನುಸರಿಸಿರುವ ಕ್ರಮ ಸರಿಯಾಗಿದೆ ಎಂದು 1892 ಮತ್ತು 1924ರ ಒಪ್ಪಂದ ಉಲ್ಲೇಖಿಸಿದ ಕೋರ್ಟ್, ಈ ತೀರ್ಪು ಮುಂದಿನ 15 ವರ್ಷಗಳಿಗೆ ಅನ್ವಯವಾಗುತ್ತದೆ ಎಂದು ಆದೇಶಿಸಿದೆ.


ಸಂಬಂಧಿತ ಟ್ಯಾಗ್ಗಳು

Supreme court Cauvery ನ್ಯಾಯಾಧೀಕರ ಅನ್ವಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ