ಅಧಿಕಾರಕ್ಕೆ ಜೋತು ಬಿದ್ದ ಜಿಪಂ ಅಧ್ಯಕ್ಷೆ..!

zilla panchayat President refuse to resign

16-02-2018

ಚಿಕ್ಕಮಗಳೂರು: ಅವಧಿ ಮುಗಿದಿದ್ದರೂ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡಿದ ಚಿಕ್ಕಮಗಳೂರು ಜಿಪಂ ಅಧ್ಯಕ್ಷೆ ಚೈತ್ರಶ್ರೀ ಅವರಿಗೆ, ಬಿಜೆಪಿ ಮುಖಂಡರು ಬೆಂಗಳೂರಿನಲ್ಲಿ ನಡೆಯುವ ಕೋರ್ ಕಮಿಟಿ ಸಭೆಗೆ ಆಗಮಿಸುವಂತೆ ಆದೇಶಿಸಿದ್ದಾರೆ.

ಸಭೆಯಲ್ಲಿ ರಾಜೀನಾಮೆ ನೀಡುವಂತೆ ಸೂಚಿಸುವ ಸಾಧ್ಯತೆಗಳಿವೆ. 2018ರ ಜನವರಿ 10ಕ್ಕೆ ಅವಧಿ ಮುಗಿದಿದ್ದರೂ ಇನ್ನೂ ರಾಜೀನಾಮೆ ನೀಡಿಲ್ಲ. ಇದು ಜಿಲ್ಲೆಯ ಹಾಗು ಪಕ್ಷದ ಮುಖಂಡರ,  ಕಾರಣವಾಗಿತ್ತು. ಆದರೆ ಚೈತ್ರಶ್ರೀ ಅವರು ಮಾತ್ರ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮೂಡಿಗೆರೆ ಕ್ಷೇತ್ರದಿಂದ ಟಿಕೆಟ್ ಕೊಡಿ, ಇಲ್ಲವೇ ಜಿಪಂ ಅಧ್ಯಕ್ಷೆ ಸ್ಥಾನ ಮುಂದುವರೆಸುವಂತೆ ಬೇಡಿಕೆ ಇಟ್ಟಿದ್ದಾರೆ. ಇಂದಿನ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಮುಖಂಡರ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡುತ್ತಾರಾ ಕಾದು ನೋಡಬೇಕಿದೆ.


ಸಂಬಂಧಿತ ಟ್ಯಾಗ್ಗಳು

Zilla panchayath core committe ಮುಜುಗರ ಮುಖಂಡ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ