ಮಹಿಳಾ ಸಿಬ್ಬಂದಿ ಮೇಲೆ ಪ್ರಯಾಣಿಕ ಹಲ್ಲೆ

Fight between railway TC and Passenger

16-02-2018

ಹುಬ್ಬಳ್ಳಿ: ಟಿಕೆಟ್ ತೋರಿಸಲು ವಿಳಂಬ ಮಾಡಿದ್ದಕ್ಕೆ ಪ್ರಯಾಣಿಕನನ್ನು ರೈಲ್ವೆ ಇಲಾಖೆ ಸಿಬ್ಬಂದಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಇದನ್ನು ನೋಡಿ ನಕ್ಕ ಇಲಾಖೆಯ ಮಹಿಳಾ‌ಸಿಬ್ಬಂದಿ ಮೇಲೆ ಆ ಪ್ರಯಾಣಿಕ ಕಬ್ಬಿಣದ ಕುರ್ಚಿಯಿಂದ ಹಲ್ಲೆ ನಡೆಸಿದ್ದಾನೆ. ಇಬ್ಬರು ಇದೀಗ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಯಾಣಿಕನನ್ನು ಪಶ್ಚಿಮ ಬಂಗಾಳದ ಪ್ರಶಾಂತ್ ಎಂದು ಹೇಳಲಾಗಿದೆ. ಗಾಯಾಳು ಮಹಿಳಾ ರೈಲ್ವೆ ಸಿಬ್ಬಂದಿಯನ್ನು ಕೆ.ರೇಖಾ ಎಂದು ಗುರುತಿಸಲಾಗಿದೆ.

ಪ್ರಶಾಂತ್ ಹೊಸಪೇಟೆಯಿಂದ ಪೂನಾಕ್ಕೆ ಹೊರಟಿದ್ದನಂತೆ. ಈತನ ಸ್ನೇಹಿತನೊಬ್ಬನ್ನು ಹುಬ್ಬಳ್ಳಿಯಲ್ಲಿ ಭೇಟಿ ಮಾಡಲು ಈತ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಇಳಿದು ತನ್ನ ಸ್ನೇಹಿತನಿಗಾಗಿ ಕಾಯುತ್ತಾ ನಿಂತಿದ್ದ. ಆಗ ಟಿಸಿ ಬಂದು ಟಿಕೆಟ್ ಕೇಳಿದ್ದಾರೆ ಈತ ಟಿಕೆಟ್ ತೋರಿಸಲು ವಿಳಂಬ ಮಾಡಿದ್ದು, ಈ ವೇಳೆ ಪ್ರಯಾಣಿಕ ಹಾಗೂ ಟಿಸಿ ನಡುವೆ ವಾಗ್ವಾದವಾಗಿದೆ. ಅಷ್ಟರೊಳಗೆ ಮತ್ತಷ್ಟು ರೈಲ್ವೆ ಸಿಬ್ಬಂದಿ ಅಲ್ಲಿ ಸೇರಿ ಈತನ ಮೇಲೆ ಹಲ್ಲೆ ನಡೆಸಿದ್ದಾರೆ.

ಇದನ್ನು ನೋಡುತ್ತಿದ್ದ ಇಲಾಖೆಯ ಮಹಿಳಾ ಸಿಬ್ಬಂದಿ ನಕ್ಕಿದ್ದಾಳೆ, ಇದರಿಂದ ರೊಚ್ಚಿಗೆದ್ದ ಪ್ರಯಾಣಿಕ ಅಲ್ಲೆ ಇದ್ದ ಕಬ್ಬಿಣದ ಕುರ್ಚಿಯಿಂದ ಮಹಿಳಾ ಸಿಬ್ಬಂದಿ ತಲೆಗೆ ಹೊಡೆದಿದ್ದಾನೆ. ಆಗ ಸ್ಥಳದಲ್ಲಿದ್ದ ಇತರೆ ಸಿಬ್ಬಂದಿ ಬಿಡಿಸಿ ಇಬ್ಬರನ್ನು ರೈಲ್ವೆ ಆಸ್ಪತ್ರೆಗೆ ಸಾಗಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Ticket collector Railway ವಾಗ್ವಾದ ಪ್ರಯಾಣಿಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ