ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಕಟ್ಟೆಚ್ಚರ

police high protection in karnataka-tamilnadu border

16-02-2018

ಆನೇಕಲ್: ಕಾವೇರಿ ನದಿ ನೀರು ಹಂಚಿಕೆ ಕುರಿತು ಇಂದು ಸುಪ್ರೀಂ ಕೋರ್ಟ್ ನಲ್ಲಿ ತೀರ್ಪು ಹೊರಬೀಳುವ ಹಿನ್ನೆಲೆ ತಮಿಳುನಾಡು-ಕರ್ನಾಟಕ ಗಡಿ ಅತ್ತಿಬೆಲೆಯಲ್ಲಿ ಬಸ್ ಸಂಚಾರ ಬಂದ್ ಮಾಡಲಾಗಿದೆ. ತಮಿಳುನಾಡಿನಿಂದ ರಾಜ್ಯಕ್ಕೆ ಒಳ ಬರುವ ಬಸ್ಗಳು ಹೊಸೂರು ನಿಲ್ದಾಣದಲ್ಲಿಯೇ ನಿಂತಿವೆ. ಇದರಿಂದ ಬೆಂಗಳೂರು ಮಾರ್ಗವಾಗಿ ಬರುವ ಪ್ರಯಾಣಿಕರು ಪರದಾಡುವಂತಾಗಿದೆ. ರಾಜ್ಯ ಸರ್ಕಾರಿ ಬಸ್ಗಳು ಸಹ ಅತ್ತಿಬೆಲೆವರೆಗೆ ಮಾತ್ರ ಪ್ರಯಾಣಿಕರನ್ನು ಪಿಕಾಪ್-ಡ್ರಾಪ್ ಮಾಡಲಾಗುತ್ತಿದೆ. ಇದೀಗ ಗಡಿಯಲ್ಲಿ ವಾಹನ ಸಂಚಾರ ಸಾಮಾನ್ಯವಾಗಿದ್ದು, ತೀರ್ಪಿಗಾಗಿ ಎರಡೂ ರಾಜ್ಯಗಳು ಕಾದುಕುಳಿತಿವೆ.


ಸಂಬಂಧಿತ ಟ್ಯಾಗ್ಗಳು

cauvery Supreme Court ತಮಿಳುನಾಡು ಹೊಸೂರು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ