ಅರ್ಧಗಂಟೆಯಲ್ಲಿ ಸುಲಿಗೆಕೋರರಿಬ್ಬರ ಬಂಧನ

police arrested two robbers in half an hour

15-02-2018

ಬೆಂಗಳೂರು: ಪ್ರಯಾಣಿಕರ ನೆಪದಲ್ಲಿ ಆಟೋ ಹತ್ತಿ ಚಾಲಕನಿಗೆ ಚಾಕು ತೋರಿಸಿ, ಬೆದರಿಸಿ, ಆಟೋ ದೋಚಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಕೇವಲ ಅರ್ಧ ಗಂಟೆಯಲ್ಲಿ ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜರಗನಹಳ್ಳಿಯ ಮಂಜುನಾಥ್ ಅಲಿಯಾಸ್ ಮಂಜ (29), ಯಲಚೇನಹಳ್ಳಿಯ ವಿಜಯ್ ಅಲಿಯಾಸ್ ವಿಜಿ (24) ಬಂಧಿತ ಸುಲಿಗೆಕೋರರಾಗಿದ್ದಾರೆ. ಬಂಧಿತರಿಂದ ಆಟೋ, ಚಾಕು, ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಕಳೆದ ಫೆ.14ರ ರಾತ್ರಿ 12ಗಂಟೆ ವೇಳೆ ಕನಕಪುರ ರಸ್ತೆಯ ಕೋಣನಕುಂಟೆ ಕ್ರಾಸ್ ಬಳಿ ಚಾಲಕ ರಾಜು ಅವರ ಆಟೋ ನಿಲ್ಲಿಸಿ ಸಾರಕ್ಕಿಗೆ ಕರೆದುಕೊಂಡು ಹೋಗುವಂತೆ ಆಟೋ ಹತ್ತಿದ್ದಾರೆ. ಸ್ವಲ್ಪ ದೂರ ಹೋದ ನಂತರ ಯಲಚೇನಹಳ್ಳಿಯ ಬಳಿ ರಾಜುನನ್ನು ಆಟೋದಿಂದ ಕೆಳಗೆ ತಳ್ಳಿ ಚಾಕು ತೋರಿಸಿ ಬೆದರಿಸಿ ಆಟೋವನ್ನು ಕಸಿದು ಪರಾರಿಯಾಗಿದ್ದರು. ಆಟೋ ಚಾಲಕ ರಾಜು ಅವರು ಮಾಹಿತಿ ನೀಡಿದ ಕೂಡಲೇ ಕಾರ್ಯಾಚರಣೆ ನಡೆಸಿದ ಕುಮಾರಸ್ವಾಮಿ ಲೇಔಟ್‍ನ ಹೊಯ್ಸಳ ಸಿಬ್ಬಂದಿಗಳಾದ ಪುಟ್ಟಸ್ವಾಮಿ ಹಾಗೂ ರಾಜಣ್ಣ ಅವರುಗಳು ಆರೋಪಿಗಳನ್ನು ಕೇವಲ ಅರ್ಧಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆ ನಡೆಸಿದ ಸಿಬ್ಬಂದಿಗೆ ದಕ್ಷಿಣ ವಿಭಾಗದ ಡಿಸಿಪಿ ಡಾ. ಎಸ್.ಡಿ. ಶರಣಪ್ಪ ಅವರು ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

robbery Auto ಕಾರ್ಯಾಚರಣೆ ಸುಲಿಗೆಕೋರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ