ಟೆಡ್ಡಿ ಬೇರ್ ಕತೆ ಗೊತ್ತಾ?

Do you know teddy bear story?

15-02-2018

ನಿಮಗೆ ಟೆಡ್ಡಿ ಬೇರ್ ಗೊತ್ತಲ್ಲ? ಅದೇ ಮುದ್ದು ಮುದ್ದಾಗಿ ಕಾಣುವ ಮತ್ತು ಜಗತ್ತಿನಲ್ಲಿ ಅತ್ಯಂತ ಫೇಮಸ್ ಆಗಿರೋ ಕರಡಿ ಗೊಂಬೆ. ತಲೆದಿಂಬಿನಂತೆ ಮೃದುವಾದ ವಸ್ತುವನ್ನು ತುಂಬಿ ತಯಾರಿಸಲ್ಪಡುವ ಟೆಡ್ಡಿ ಬೇರ್ ಎಲ್ಲ ಮಕ್ಕಳಿಗೆ ಮತ್ತು ಕೆಲವರು ವಯಸ್ಕರಿಗೂ ಅತ್ಯಂತ ಅಚ್ಚು ಮೆಚ್ಚು. ಇದನ್ನು ಟೆಡ್ಡಿ ಬೇರ್ ಅಂತ ಕರೆಯುವುದರ ಹಿಂದೆ 115 ವರ್ಷಗಳ ಹಿಂದಿನ ಒಂದು ಕತೆ ಇದೆ.  

ಎಲ್ಲರಿಗೂ ಗೊತ್ತಿರೋ ಹಾಗೆ ಹಿಂದೆ ರಾಜರು ಮತ್ತು ಅಧಿಕಾರಸ್ಥರು ಮೋಜಿಗಾಗಿ ಕಾಡು ಪ್ರಾಣಿಗಳ ಬೇಟೆ ಆಡುತ್ತಿದ್ದರು. ಹಾಗೇ, ಒಂದು ಬಾರಿ ಅಮೆರಿಕದ ಅಧ್ಯಕ್ಷರಾಗಿದ್ದ ಥಿಯೋಡರ್ ರೂಸ್ವೆಲ್ಟ್ ಅವರು 1902ರಲ್ಲಿ ಮಿಸಿಸಿಪ್ಪಿ ಪ್ರದೇಶದ ಕಾಡಿನಲ್ಲಿ ಬೇಟೆಗೆ ಹೋಗಿದ್ದರಂತೆ. ಆಗ, ಅವರ ಜೊತೆಗಾರರು ಕಪ್ಪು ಕರಡಿಯೊಂದನ್ನು ಹಿಡಿದು ಮರಕ್ಕೆ ಕಟ್ಟಿ, ಅದಕ್ಕೆ ಗುಂಡು ಹೊಡೆಯುವಂತೆ ಹೇಳಿದಾಗ, ಅಧ್ಯಕ್ಷ ರೂಸ್ವೆಲ್ಟ್ ಅವರಿಗೆ ಹಾಗೆ ಮಾಡಲು ಮನಸ್ಸು ಬಾರದೆ ಅದನ್ನು ಬಂಧಮುಕ್ತಗೊಳಿಸಿದರಂತೆ. 

ಇದಾದ ಕೆಲವು ಸಮಯದ ನಂತರ 1903ನೇ ಇಸವಿ ಫೆಬ್ರವರಿ 15ರಂದು ಆಟಿಕೆಗಳ ಅಂಗಡಿ ಮಾಲೀಕ ಮಾರಿಸ್ ಮಿಚ್ಟೊಮ್, ತನ್ನ ಅಂಗಡಿಯ ಶೋ ಕೇಸ್ ನಲ್ಲಿ ಎರಡು ಕರಡಿ ಮರಿಗಳ ಗೊಂಬೆಗಳನ್ನಿಟ್ಟು ಅವಕ್ಕೆ ಟೆಡ್ಡಿ ಬೇರ್ ಎಂಬ ಹೆಸರು ಕೊಟ್ಟಿದ್ದ. ಇದಕ್ಕೆ ಮೊದಲು, ಅಧ್ಯಕ್ಷ ಥಿಯೋಡರ್ ರೂಸ್ ವೆಲ್ಟ್ ಅವರಿಗೆ ಪತ್ರ ಬರೆದು ಅವರ ನಿಕ್ ನೇಮ್ ಅಂದ್ರೆ ಪ್ರೀತಿಯಿಂದ ಕರೆಯುವ ಟೆಡ್ಡಿ ಎಂಬ ಹೆಸರನ್ನು ಅದಕ್ಕೆ ಇಡಲು ಅನುಮತಿ ಪಡೆಯಲಾಗಿತ್ತು. ಈ ಗೊಂಬೆಗಳು ಜನಪ್ರಿಯವಾಗುತ್ತಿದ್ದಂತೆ, ಇತರೆ ತಯಾರಕರೂ ಕೂಡ ಇದೇ ರೀತಿ ಪುಟ್ಟ ಕರಡಿಯ ಗೊಂಬೆಗಳನ್ನು ತಯಾರಿಸಿ ಅವೆಲ್ಲವನ್ನೂ ಟೆಡ್ಡಿ ಬೇರ್ ಎಂಬ ಹೆಸರಿನಲ್ಲೇ ಮಾರಾಟ ಮಾಡತೊಡಗಿದರು. ಆ ಹೊತ್ತಿನಿಂದ ಈ ಹೊತ್ತಿನವರೆಗೂ, ಟೆಡ್ಡಿ ಬೇರ್ ವಿಶ್ವಾದ್ಯಂತ ಎಲ್ಲ ಮಕ್ಕಳಿಗೆ ಅಚ್ಚುಮೆಚ್ಚು.


ಸಂಬಂಧಿತ ಟ್ಯಾಗ್ಗಳು

teddy bear Famous ಮಿಸಿಸಿಪ್ಪಿ ತಯಾರಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ