ಏ 'ಅಂದರ್ ಕಿ' ಬಾತ್ ಹೈ…15-02-2018

ಬೆಂಗಳೂರು: ಪ್ರಿಯತಮೆಗೆ ಕೊಟ್ಟಿದ್ದ ಒಳ ಉಡುಪಿನ ಉಡುಗೊರೆ ಮತ್ತು ಅದರ ವಿಡಿಯೊ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಯುವಕನೊಬ್ಬ ತನ್ನ ಪ್ರಿಯತಮೆಗೆ ಒಳ ಉಡುಪುಗಳನ್ನು ಗಿಫ್ಟ್ ಮಾಡಿ. ಅವುಗಳನ್ನು ಧರಿಸಿ ವಿಡಿಯೊ ಮಾಡಿ ಕಳಿಸುವಂತೆ ದುಂಬಾಲು ಬಿದ್ದಿದ್ದನಂತೆ. ಅವನ ಒತ್ತಾಯಕ್ಕೆ ಮಣಿದಿದ್ದ ಯುವತಿ ವಿಡಿಯೋ ಮಾಡಿ ಕಳುಹಿಸಿದ್ದಳಂತೆ. ಆದರೆ, ಅದೇ ವಿಡಿಯೋ ಇಟ್ಟುಕೊಂಡು ಯುವಕ ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಯುವತಿ ತಂದೆ ಭವಾರ್ ಲಾಲ್ ಅವರು ಗುರುಪ್ರಸಾದ್ ಎಂಬ ಯುವಕನ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಆದರೆ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಬೇರೆಯದ್ದೇ ವಿಷಯ ಗೊತ್ತಾಗಿದೆ. ಗುರುಪ್ರಸಾದ್ ಮತ್ತು ಭವರ್ ಲಾಲ್ ಮಗಳು ಕಳೆದ ವರ್ಷ ನವೆಂಬರ್ 17ರಂದು ಮದುವೆಯಾಗಿದ್ದರು. ಆದರೆ, ಹುಡುಗನ ಜಾತಿ ಬೇರೆಯಾಗಿದ್ದ ಹಿನ್ನೆಲೆ ಭವರ್ ಲಾಲ್ ಈ ಮದುವೆಗೆ ಒಪ್ಪಿರಲಿಲ್ಲ. ಅದುಹೇಗೋ ಯುವತಿ ತನ್ನ ಪ್ರಿಯಕರನಿಗೆ ಕಳಿಸಿದ್ದ ವಿಡಿಯೊ ತಂದೆಗೆ ಸಿಕ್ಕಿತ್ತು, ಇದನ್ನೇ ಬಳಸಿಕೊಂಡ ಅವರು, ತನ್ನ ಇಷ್ಟಕ್ಕೆ ವಿರುದ್ಧವಾಗಿ ಮದುವೆಯಾದ ಮಗಳಿಗೆ ಪಾಠ ಕಲಿಸುವ ಸಲುವಾಗಿ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಯುವತಿ, ತನ್ನ ತಂದೆಯ ವಿರುದ್ಧವೇ ಪೊಲೀಸರಿಗೆ ಹೇಳಿಕೆ ನೀಡಿದ್ದು, ಗಂಡನ ಮನೆ ಬಿಟ್ಟು ಬರುವಂತೆ ತನ್ನ ತಂದೆ ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾಳೆ.


ಸಂಬಂಧಿತ ಟ್ಯಾಗ್ಗಳು

Crime Dhoka ಒಳ ಉಡುಪು ದುಂಬಾಲು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ