ಶಾಂತಿಗಾಗಿ ಸರ್ವಧರ್ಮ ಸಮ್ಮೇಳನ

All religion conference in gadag

15-02-2018

ಗದಗ: ಇದೇ ತಿಂಗಳ 18ರಂದು ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಅಖಿಲ ಕರ್ನಾಟಕ ಸರ್ವಧರ್ಮ ಶಾಂತಿ ಸಮ್ಮೇಳನ ಆಯೋಜಿಸಲಾಗಿದೆ ಎಂದು ರೋಣ ಶಾಸಕ ಜಿ.ಎಸ್. ಪಾಟೀಲ್ ಹೇಳಿದ್ದಾರೆ. ಈ ಸಂದರ್ಭದಲ್ಲಿ ಸರ್ವಧರ್ಮಗಳ ಗುರುಗಳ ನೇತೃತ್ವದಲ್ಲಿ ಸೌಹಾರ್ದತೆ ಹಾಗೂ ಶಾಂತಿಗಾಗಿ ಭಾರತದ ಸಂವಿಧಾನ ಮತ್ತು ಸರ್ವ ಧರ್ಮಗಳ ಗ್ರಂಥಗಳ ಮೆರವಣಿಗೆ ಹಾಗೂ ಪಾದಯಾತ್ರೆ ನಡೆಸಲಿದ್ದೇವೆ ಎಂದು ಜಿ.ಎಸ್. ಪಾಟೀಲ್ ತಿಳಿಸಿದ್ದಾರೆ. ಈ ಸರ್ವಧರ್ಮ ಸಮ್ಮೇಳನದಲ್ಲಿ ಗದಗದ ತೋಂಟದಾರ್ಯ ಸಿದ್ದಲಿಂಗ ಶ್ರೀಗಳು, ಹಾಲಕೇರಿ ಅಭಿನವ ಅನ್ನದಾನ ಶ್ರೀ, ವಿಜಯಪುರದ ಡಾ.ಸೈಯದ್ ಮುರ್ತುಜಾ ಹುಸೇನಿ ಹಾಶ್ಮಿ, ಧಾರವಾಡದ ಫಾದರ್ ಪ್ರಶಾಂತ್ ಡಿಸೋಜ ಸೇರಿದಂತೆ ಎಲ್ಲ ಧರ್ಮಗಳ  ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ