ತಾಯಿ-ಇಬ್ಬರು ಮಕ್ಕಳ ಸಜೀವ ದಹನ

Mother and 2 children burnt alive

15-02-2018

ಬೆಂಗಳೂರು: ಮಾನಸಿಕ ಸ್ಥಮಿತ ಕಳೆದುಕೊಂಡಿದ್ದ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳ ಮೇಲೆ ಸೀಮೆ ಎಣ್ಣೆ ಸುರಿದು ತಾನೂ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಮೂವರು ಸಜೀವ ದಹನವಾಗಿರುವ ಹೃದಯ ವಿದ್ರಾವಕ ಘಟನೆ ಮಾರತ್‍ಹಳ್ಳಿಯ ಸಂಜಯ್‍ನಗರದಲ್ಲಿ ನಡೆದಿದೆ. ಸಂಜಯನಗರದ ರಾಮಲಿಂಗಮ್ಮ(26)ಮಕ್ಕಳಾದ ಬಸವಂತ(4)ಹಾಗೂ ಆಸಿನಿ(2)ಅವರಿಗೆ ಸೀಮೆ ಎಣ್ಣೆ ಸುರಿದು ತಾನೂ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಸಜೀವ ದಹನವಾಗಿದ್ದಾರೆ.

ರಾಮಲಿಂಗಮ್ಮ ಅವರ ಪತಿ ಗಾರೆ ಕೆಲಸ ಮಾಡುತ್ತಿದ್ದ ಮಹೇಂದ್ರ ಬೆಳಿಗ್ಗೆ ಕೆಲಸಕ್ಕೆ ಹೋದ ನಂತರ ಈ ದಾರುಣ ಘಟನೆ ನಡೆದಿದೆ. ಪತಿ ಕೆಲಸಕ್ಕೆ ಹೋಗುವುದನ್ನು ಕಾದಿದ್ದ ರಾಮಲಿಂಗಮ್ಮ ಗಂಡು ಮಗು ಬಸವಂತ ಹಾಗೂ ಹೆಣ್ಣು ಮಗು ಆಸಿನಿ ಮೇಲೆ ಸೀಮೆ ಎಣ್ಣೆ ಸುರಿದು ತಾನೂ ಸುರಿದುಕೊಂಡು ಬೆಂಕಿ ಹೊತ್ತಿಸಿಕೊಂಡಿದ್ದಾಳೆ. ಮನೆಯಿಂದ ಹೊರಗೆ ಬೆಂಕಿ ಹೊರಬರುತ್ತಿರುವುದನ್ನು ಗಮನಿಸಿ ಸ್ಥಳೀಯರು ಹೋಗುವಷ್ಟರಲ್ಲಿ ಮೂವರು ಸುಟ್ಟು ಕರಕಲಾಗಿದ್ದರು. ಕೃತ್ಯವೆಸಗಿರುವ ರಾಮಲಿಂಗಮ್ಮ ಮಾನಸಿಕ ರೋಗದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿರುವ ಎಚ್‍ಎಎಲ್ ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

 

 


ಸಂಬಂಧಿತ ಟ್ಯಾಗ್ಗಳು

Burnt live bengaluru ಸೀಮೆಎಣ್ಣೆ ಹೃದಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ