ಇದೆಂಥ ಮಾತು ಸಚಿವರೇ?

controversial statement of Ramesh Jigajinagi..!

15-02-2018

ವಿಜಯಪುರ: ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮತ್ತೆ ದಲಿತ ಮುಖ್ಯಮಂತ್ರಿ ವಿಚಾರ ಸದ್ದು ಮಾಡುತ್ತಿದೆ. ಈ ಕುರಿತು ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಪ್ರತಿಕ್ರಿಯಿಸಿದ್ದು ‘ದಲಿತ ಸಮುದಾಯದವರು ರಾಜ್ಯದ ಮುಖ್ಯ ಮಂತ್ರಿಯಾಗಬೇಕು ಅನ್ನುವುದು ನನ್ನ ಅಭಿಮತ, ಆದರೆ ಅದಕ್ಕೆ ಇನ್ನೂ ಕಾಲ ಕೂಡಿಬಂದಿಲ್ಲ’ ಎಂದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅನ್ಯಾಯ ಮಾಡಿದ ಕಾಂಗ್ರೆಸ್ ಪಕ್ಷ ಖರ್ಗೆಯವರನ್ನೂ ಸಿಎಂ ಆಗಲು ಬಿಟ್ಟಿಲ್ಲ ಎಂದು ಜಿಗಜಿಣಗಿ ಟೀಕಿಸಿದ್ದಾರೆ. ಇದೇ ವೇಳೆ ‘ಬಿಜೆಪಿಯಲ್ಲಿರುವ ದಲಿತರು ಯಾರೂ ಪಾಪಿಷ್ಠರಲ್ಲ, ಕಾಂಗ್ರೆಸ್ ನಲ್ಲಿರುವ ದಲಿತರು ಮಾತ್ರ ಪಾಪಿಷ್ಠರು’ ಎಂದು ಹೇಳಿರುವ ಜಿಗಜಿಣಗಿಯವರು ವಿವಾದ ಸೃಷ್ಟಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Ramesh Jigajinagi congress ಅಂಬೇಡ್ಕರ್ ಪಾಪಿಷ್ಠ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ